ಚೆಟ್ಟಳ್ಳಿ, ಆ. 10: ಇಲ್ಲಿನ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಹಾಸಭೆ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್. ದಿಲೀಪ್ ಅಪ್ಪಚ್ಚು ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಸುರೇಶ್ ಬಾಬು 2018-2019ನೇ ಸಾಲಿನ ದೇವಸ್ಥಾನ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ಕೋಶಾಧಿಕಾರಿ ಬಿ.ಎ. ಧನಂಜಯ ಲೆಕ್ಕಪತ್ರ ಮಂಡಿಸಿದರು. ಸಮಿತಿ ಸದಸ್ಯರಾಗಿದ್ದ ಟಿ.ಆರ್. ಪ್ರಭುದೇವ್ ಅವರು ಸಲಹೆಗಾರರಾಗಿ, ಕೆ.ಬಿ. ಪ್ರದೀಪ್, ಸಹ ಖಜಾಂಚಿಯಾಗಿ ಆಯ್ಕೆಯಾದರು. ನಿಧನ ಹೊಂದಿದ ಹಿರಿಯ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಅಧ್ಯಕ್ಷ ದಿಲೀಪ್ ಅಪ್ಪಚ್ಚು ಸ್ವಾಗತಿಸಿ, ಧನಂಜ್ ವಂದಿಸಿದರು. ಸಲಹೆಗಾರ ಪಿ. ಕಣ್ಣನ್ ಹಾಗೂ ಸದ್ಯಸರುಗಳು ಇದ್ದರು.