ಮಡಿಕೇರಿ, ಆ. 9 : ಮುಕ್ಕೋಡ್ಲು ವ್ಯಾಪ್ತಿಯಲ್ಲಿನ ಧಾರಾಕಾರ ಮಳೆಯ ನಡುವೆ ಅಲ್ಲಿನ ಹಲವು ರಸ್ತೆಗಳು ಸಂಪರ್ಕ ರಹಿತವಾಗಿದೆ. ಈ ನಡುವೆ ಮುಕ್ಕೋಡ್ಲುವಿನವರಾದ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರು ಮುಕ್ಕೋಡ್ಲುವಿನ ಮನೆಯಲ್ಲಿ ಕಳೆದ ಎರಡು ದಿನಗಳಿಂದ ಸಿಲುಕಿಕೊಂಡಿದ್ದರು. ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಯಾರೊಂದಿಗೂ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಅಲ್ಲೇ ಉಳಿಯುವಂತಾಗಿತ್ತು. ಇಂದು ಹಲವರೊಂದಿಗೆ ಕೆಲವು ಕಿ.ಮೀ. ನಡೆದು ಮಡಿಕೇರಿಗೆ ಆಗಮಿಸಿದ್ದಾಗಿ ತಿಳಿಸಿರುವ ಅವರು ಜಿಲ್ಲೆಯಲ್ಲಿನ ಶೋಚನೀಯ ಸ್ಥಿತಿಯ ಬಗ್ಗೆ ನೆಟ್‍ವರ್ಕ್‍ನ ಸಮಸ್ಯೆ ಇರುವದು ಇನ್ನೂ ಸಮಸ್ಯೆಗೆ ಕಾರಣವಾಗುತ್ತಿದೆ ಎಂದಿದ್ದಾರೆ.