ಮಡಿಕೇರಿ, ಆ.9: ಮಳೆ ಆರ್ಭಟಕ್ಕೆ ಸಿಲುಕಿ ಹಲವು ಪತ್ರಕರ್ತರಾದ ಸಿದ್ದಾಪುರ ಸುನಿಲ್, ಕುಶಾಲನಗರ ಚಂದ್ರಮೋಹನ್, ಗುಡ್ಡೆಹೊಸೂರಿನ ಉದಯ್ ಮೊಣ್ಣಪ್ಪ, ಗೋಣಿಕೊಪ್ಪದ ಕುಪ್ಪಂಡ ದತ್ತಾತ್ರಿ, ವೀರಾಜಪೇಟೆಯ ಪಾರ್ಥ ಚಿಣ್ಣಪ್ಪ, ಭಾಗಮಂಡಲದ ಸುನಿಲ್, ಡಿ. ನಾಗೇಶ್, ಬಾಡಗರಕೇರಿಯ ಹರೀಶ್ ಮಾದಪ್ಪ, ಗುಹ್ಯದ ರೆಜಿತ್ ಕುಮಾರ್ ಇವರುಗಳ ಮನೆಗಳು ಅಪಾಯಕ್ಕೆ ಸಿಲುಕಿವೆ. ಜೊತೆಗೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅವರ ತಾಯಿ ಹಾಗೂ ಸಹೋದರಿಯನ್ನು ಬೇತ್ರಿಯ ಮನೆಯಿಂದ ಸುರಕ್ಷಿತ ಸ್ಥಳಕ್ಕೆ ಜಿಲ್ಲಾಡಳಿತದ ನೆರವಿನಿಂದ ಸ್ಥಳಾಂತರಿಸಲಾಗಿದೆ.