ನಾಪೆÇೀಕ್ಲು, ಆ. 9: ಕಳೆದ ಮೂರು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಮಳೆಯಿಂದ ಎಲ್ಲಾ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕೊಟ್ಟಮುಡಿಯಲ್ಲಿ ಪ್ರವಾಹ ಉಂಟಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಮತ್ತು ಮೂರ್ನಾಡುವಿನ ಸಂಪರ್ಕ ಕಡಿತಗೊಂಡಿದೆ. ಕಕ್ಕಬ್ಬೆ ಹೊಳೆಯಲ್ಲಿ ಪ್ರವಾಹ ಉಂಟಾದ ಕಾರಣ ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡುವಿನ ಸಂಪರ್ಕ ಕಡಿತ ಗೊಂಡಿದೆ. ಕೊಳಕೇರಿ - ಕೋಕೇರಿಗೆ ಸಂಪರ್ಕ ಕಲ್ಪಿಸುವ ಕಕ್ಕಬ್ಬೆ ಸೇತುವೆ ಮೇಲೆ ನಾಲ್ಕು ಅಡಿಗಳಷ್ಟು ಪ್ರವಾಹ ಹರಿಯುತ್ತಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೆÇೀಕ್ಲು- ವೀರಾಜಪೇಟೆ ಮುಖ್ಯ ರಸ್ತೆಯ ಕೋಟೇರಿ ಮತ್ತು ಕಕ್ಕಬ್ಬೆಯಲ್ಲಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಈ ವ್ಯಾಪ್ತಿಯಲ್ಲಿ ಖಾಸಗಿ ಹಾಗೂ ಸಾರಿಗೆ ಬಸ್‍ಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪಟ್ಟಣದಿಂದ ಬಲ್ಲಮಾವಟಿ ಗ್ರಾಮದವರೆಗೆ ಮಾತ್ರ ವಾಹನ ಓಡಾಡುತ್ತಿರುವ ಬಗ್ಗೆ ತಿಳಿದುಬಂದಿದೆ.

ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರವಾಹ ಉಂಟಾದ ಹಿನ್ನಲೆಯಲ್ಲಿ ಚೆರಿಯಪರಂಬು ಕಾವೇರಿ ನದಿ ತೀರದಲ್ಲಿ ವಾಸವಿದ್ದ ಎಲ್ಲಾ ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ಸಂಕಷ್ಟದಲ್ಲಿ ಸಿಲುಕಿ ದವರನ್ನು ರಕ್ಷಿಸಲು ಎನ್‍ಡಿಆರ್‍ಎಫ್‍ನ ತಂಡ ಸನ್ನದ್ಧವಾಗಿದೆ.

ಕತ್ತಲೆಯಲ್ಲಿ ನಾಪೆÇೀಕ್ಲು: ಕಳೆದ ಮೂರು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿಕೊಂಡಿದೆ. ಎಲ್ಲಿ ಹೋದರೂ ಮರದ ಕೊಂಬೆ ಬಿದ್ದು, ಮರ ಬಿದ್ದು ವಿದ್ಯುತ್ ಕಂಬಗಳು, ತಂತಿಗಳು ರಸ್ತೆಯಲ್ಲಿ ಬಿದ್ದಿರುವದು ಕಂಡುಬರುತ್ತಿದೆ. ಇದರೊಂದಿಗೆ ಬಿಎಸ್‍ಎನ್‍ಎಲ್, ಜಿಯೋ ನೆಟ್‍ವರ್ಕ್ ಇಲ್ಲದಿರುವದು ಸಾರ್ವಜನಿಕರಿಗೆ ತೊಂದರೆಯನ್ನುಂಟುಮಾಡಿದೆ.

ಅಲ್ಲಲ್ಲಿ ಬರೆ ಕುಸಿತ: ಬರೆ ಕುಸಿತದ ಕಾರಣದಿಂದ ಈ ವ್ಯಾಪ್ತಿಯಲ್ಲಿ ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಕಾಫಿ ತೋಟಗಳಲ್ಲಿಯೂ ಕೂಡ ಅಲ್ಲಲ್ಲಿ ಕುಸಿತ ಕಂಡು ಬಂದಿದ್ದು, ಮಳೆಯ ರಭಸ ಕಡಿಮೆಯಾದ ನಂತರವಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

-ಪಿ.ವಿ.ಪ್ರಭಾಕರ್