ಪಿ.ಕೆ. ಪೊನ್ನಪ್ಪ ಮಾಹಿತಿ

ಮಡಿಕೇರಿ, ಆ. 9: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಕಳೆದ 18 ತಿಂಗಳ ಕಾಲ ಸೇವೆ ಸಲ್ಲಿಸಿದ ಸಂದರ್ಭ ಕೊಡಗಿನ ವಿವಿಧೆಡೆ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಪೂರಕವಾಗಿ 24 ಸಾರ್ಥಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ಸನ್ನು ಸಾಧಿಸಿದ್ದು, ತಮ್ಮ ಕಾರ್ಯ ತೃಪ್ತಿ ತಂದಿದೆ ಎಂದು ಅಕಾಡೆಮಿಯ ನಿರ್ಗಮಿತ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಾರ್ವಜನಿಕರು, ಕೊಡವ ಬಾಂಧವರು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಅಕಾಡೆಮಿ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಯಿತು ಎಂದು ತೃಪ್ತಿ ವ್ಯಕ್ತಪಡಿಸಿದರು.

ಮಾಯಮುಡಿಯಲ್ಲಿ ಕೊಡವ ಸಾಂಸ್ಕøತಿಕ ಮೇಳ, ಯವಕಪಾಡಿಯಲ್ಲಿ ಕುಡಿಯಡ ಮಂದ್ ನಮ್ಮೆ, ಮಾದಪುರದಲ್ಲಿ ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ, ಮಡಿಕೇರಿಯಲ್ಲಿ ಪತ್ರಕರ್ತಂಗಡ ಕೂಡೆ ಸಂವಾದ, ಅನುಭವಕಾರಡ ಕೂಡೆ ತಕ್ಕ್ ಬಾಕ್, ಪಂದ್ಯಂಡ ಬೊಳ್ಯಪ್ಪ ಸ್ಮರಣೆ ಪಿಂಞ ವಿಚಾರ ಮಂಡನೆ, ಹುದಿಕೇರಿಯಲ್ಲಿ ಪುದಿಯಕ್ಕಿ ಕೂಳುಂಬೊ ಪಿಂಞ ಪಲಕ ಇಡುವ ಕಾರ್ಯಕ್ರಮ, ಹಮ್ಮಿಯಾಲದಲ್ಲಿ ಕೊಡವ ಕಳಿನಮ್ಮೆ, ಮಡಿಕೇರಿಯಲ್ಲಿ ಸಾಹಿತ್ಯ ಶಿಬಿರ ಪಿಂಞ ಸಂವಾದ, ಕೊಡವ ತೀನಿ ನಮ್ಮೆ, ನಾಕೂರಿನಲ್ಲಿ ಬೇಲ್ ನಮ್ಮೆ, ಮಡಿಕೇರಿಯಲ್ಲಿ ಕಾವೇರಿ ತೀರ್ಥ ಪೂಜೆ ಪಿಂಞ ದುಡಿ ಬಳ್‍ಂಬುವೊ, ಗೋಣಿಕೊಪ್ಪಲಿನಲ್ಲಿ ಹರದಾಸ ಅಪ್ಪಚ್ಚಕವಿರ 150ನೇ ಪುಟ್ಟ್‍ನ ದಿನ ಪಿಂಞ 75ನೇ ಪುಣ್ಯಸ್ಮರಣೆ, ಹೈಸೊಡ್ಲುರ್ ಪಯ್ಯಡ ಮಂದ್ ತೊರ್‍ಪೊ, ಬಿರುನಾಣಿಯಲ್ಲಿ ಮರೆನಾಡ್ ಕೋಲ್, ತೂಚಮಕೇರಿಯಲ್ಲಿ ಪೊಲೆಮಲೆಕೇರಿ ಮಂದ್ ತೊರ್‍ಪೊ, ನಾಪೋಕ್ಲುವಿನಲ್ಲಿ ಕುಂಞÂಯಡ ಕೊಡವ ಜನಪದ ಸಾಂಸ್ಕøತಿಕ ನಮ್ಮೆ, ಮಾಯಾಮುಡಿಯಲ್ಲಿ ಕೊಡವ ಸಾಂಸ್ಕøತಿಕ ಮೇಳ, ಕಕ್ಕಬೆ ಯುವಜಪಾಡಿಯಲ್ಲಿ ಕುಡಿಯಡ ಮಂದ್ ನಮ್ಮೆ, ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ, ಅರುವತ್ತೋಕ್ಲುವಿನಲ್ಲಿ ಆಟ್‍ಪಾಟ್ ಪಡಿಪು ಕಾರ್ಯಕ್ರಮ, ಆಟ್-ಪಾಟ್ ಪಡಿಪು ಆಖೀರಿ ಸಮಾರಂಭ, ಕಾಲೂರಿನಲ್ಲಿ ಕೊಡವ ಜಾನಪದ ನಮ್ಮೆ, ಟಿ. ಶೆಟ್ಟಿಗೇರಿಯಲ್ಲಿ ಪುದಿಯಕ್ಕಿ ಕೂಳುಂಬೊ ಪಿಂಞ ಆಟ್-ಪಾಟ್ ಆಖೀರಿ ಸಮಾರಂಭ, ಬೇತುವಿನಲ್ಲಿ ಕೊಡವ ಭಾಷಿಕ ನಮ್ಮೆ, ಕರವಲೆ ಬಾಡಗ ಶ್ರೀ ಭಗವತಿ ದೇವಸ್ಥಾನ, ಮೂವತ್ತೊಕ್ಲು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ, ತೂಚಮಕೇರಿ ಶ್ರೀಮಹದೇವ ದೇವಾಲಯ ಹಾಗೂ ಕಂಡಂಗಾಲ ಅಪ್ಪಂಡೇರಂಡ ಐನ್‍ಮನೆಯಲ್ಲಿ ದುಡಿ ಪಿಂಞ ತಾಳ ಬಳಂಬುವೊ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವದಲ್ಲದೆ ಗೋಣಿಕೊಪ್ಪ ಕಾವೇರಿ ಕಾಲೇಜ್‍ನಲ್ಲಿ ನಡೆದ “ಬೊಳ್ಳಿನಮ್ಮೆ” ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಯಿತು ಎಂದು ಪೊನ್ನಪ್ಪ ವಿವರಿಸಿದರು.

ನಿರ್ಗಮಿತ ಸದಸ್ಯ ಉಮೇಶ್ ಕೇಚಮಯ್ಯ ಮಾತನಾಡಿ, ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗಾಗಿ “ಸಾಂಸ್ಕøತಿಕ ಗ್ರಾಮ” ಎನ್ನುವ ಯೋಜನೆಯಡಿ ನಿವೇಶನವನ್ನು ಹೊಂದುವ ಗುರಿ ನಮ್ಮ ಅವಧಿಯಲ್ಲಿತ್ತು. ನಿವೇಶನಕ್ಕೆ ಸಂಬಂಧಿಸಿದಂತೆ ಅರ್ಜಿ ವಿಲೇವಾರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕಡತ ವೀರಾಜಪೇಟೆ ತಾಲೂಕು ಕಚೇರಿಯಲ್ಲಿದೆ ಎಂದರು.

ಮುಂದೆ ಅಧಿಕಾರಕ್ಕೆ ಬರುವ ಆಡಳಿತ ಮಂಡಳಿ “ಸಾಂಸ್ಕøತಿಕ ಗ್ರಾಮ” ಯೋಜನೆಯನ್ನು ಯಶಸ್ವಿಗೊಳಿಸಲಿ ಎಂದು ತಿಳಿಸಿದರು. ಎಲ್ಲಿಯೂ, ಯಾರಿಂದಲೂ ವಂತಿಗೆ ವಸೂಲಿ ಮಾಡದೆ ಅಕಾಡಮಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಿಂದಲೇ 24 ಕಾರ್ಯಕ್ರಮಗಳನ್ನು ಚ್ಯುತಿ ಬಾರದ ರೀತಿಯಲ್ಲಿ ನಮ್ಮ ಅವಧಿಯಲ್ಲಿ ಆಯೋಜಿಸಲಾಗಿತ್ತು ಎಂದು ಉಮೇಶ್ ಕೇಚಮಯ್ಯ ಹೆಮ್ಮೆ ವ್ಯಕ್ತಪಡಿಸಿದರು.

ನಿಂತು ಹೋಗಿದ್ದ ಮಂದ್‍ಗಳಲ್ಲಿ ಚಟುವಟಿಕೆಗಳನ್ನು ಆರಂಭಿಸಿದಲ್ಲದೇ ಹೊಸ ಮಂದ್‍ಗಳನ್ನು ರಚಿಸಲಾಗಿದೆ. ಇನ್ನು ಮುಂದೆಯೂ ಹೊಸ ಆಡಳಿತ ಮಂಡಳಿಗೆ ಎಲ್ಲಾ ಸಹಕಾರವನ್ನು ನೀಡುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ನಿರ್ಗಮಿತ ಸದಸ್ಯರುಗಳಾದ ಅಂಚೆಟ್ಟಿರ ಮನು ಮುದ್ದಪ್ಪ ಹಾಗೂ ಬೊಳ್ಳಜಿರ ಬಿ. ಅಯ್ಯಪ್ಪ ಉಪಸ್ಥಿತರಿದ್ದರು.