ಕೂಡಿಗೆ, ಆ. 9: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಹಾರಂಗಿ ಒಳ ಹರಿಯುವ ಪ್ರಮಾಣ ಪರೀಕ್ಷಿಸಲು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿದರು. ಅಣೆಕಟ್ಟೆಯ ಭದ್ರತೆ, ಮತ್ತು ಒಳಹರಿವಿನ ಪ್ರಮಾಣ ಗಮನಿಸಿ ನೀರನ್ನು ನದಿಗೆ ಬಿಡುವಂತೆ ಸೂಚಿಸಿದರು. ಅಲ್ಲದೆ ವಾಟರ್‍ಕೇಚ್ ವೀಕ್ಷಿಸಿ ಅದರ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ರಾಜೇಗೌಡ, ಸಹಾಯಕ ಇಂಜಿನಿಯರ್ ನಾಗರಾಜ ಹಾಗೂ ಸಿಬ್ಬಂದಿ ವರ್ಗ ಇದ್ದರು.