ನಾಪೆÉÇೀಕ್ಲು, ಆ. 9: ನಾಪೆÇೀಕ್ಲು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ನಿಲುಗಡೆಗೆ ಸ್ಥಳವಿಲ್ಲದ ಕಾರಣ ಕೊಡವ ಸಮಾಜಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಜನ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಕೊಡವ ಸಮಾಜದ ಸಮಾ ರಂಭಕ್ಕೆ ಆಗಮಿಸು ವವರಿಗೆ ತೊಂದರೆ ಯಾಗಿದೆ.
ಆದ್ದರಿಂದ ಕೂಡಲೇ ಪೆÇಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಹಾಗೂ ಸದಸ್ಯ ಶಿವಚಾಳಿಯಂಡ ಜಗದೀಶ್ ಆಗ್ರಹಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಪಟ್ಟಣದಲ್ಲಿ 15 ದಿನ ಎಡ ಭಾಗದಲ್ಲಿ ಹಾಗೂ 15 ದಿನ ಬಲ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದಂತೆ ಕೊಡವ ಸಮಾಜ ರಸ್ತೆಯಲ್ಲೂ ಅವಕಾಶ ನೀಡಿದರೆ, ಸಾರ್ವಜನಿಕರಿಗೆ, ಸಮಾರಂಭಕ್ಕೆ ಆಗಮಿಸುವವರಿಗೆ ಯಾವದೇ ತೊಂದರೆಯಾಗುವದಿಲ್ಲ. ಇಲ್ಲಿಗೆ ಒಬ್ಬ ಪೇದೆಯನ್ನು ನೇಮಿಸಿದರೆ, ಈ ಸಮಸ್ಯೆ ಪರಿಹಾರವಾಗುತ್ತದೆ ಎಂದ ಅವರು, ಈ ಬಗ್ಗೆ ಪೆÇಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.