ನಾಪೆÇೀಕ್ಲು, ಆ. 8: ಕಳೆದೆರಡು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಯಿಂದ ನಾಪೆÇೀಕ್ಲು ಪಟ್ಟಣ ಎಲ್ಲಾ ಕಡೆಗಳಿಂದ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿದೆ.
ಕೊಡಗಿನ ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿರುವ ಪರಿಣಾಮ ಸಮೀಪದ ಕೊಟ್ಟಮುಡಿಯಲ್ಲಿ ಪ್ರವಾಹ ಉಂಟಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಮತ್ತು ಮೂರ್ನಾಡುವಿನ ಸಂಪರ್ಕ ಕಡಿತಗೊಂಡಿದೆ. ಹಾಗೆಯೇ ಕಕ್ಕಬ್ಬೆ ಹೊಳೆಯಲ್ಲಿ ಪ್ರವಾಹ ಉಂಟಾದ ಕಾರಣ ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡುವಿನ ಸಂಪರ್ಕ ಕಡಿತಗೊಂಡಿದೆ. ಹಾಗೆಯೇ ಕೊಳಕೇರಿ - ಕೋಕೇರಿಗೆ ಸಂಪರ್ಕ ಕಲ್ಪಿಸುವ ಕಕ್ಕಬ್ಬೆ ಸೇತುವೆ ಮೇಲೆ ನಾಲ್ಕು ಅಡಿಗಳಷ್ಟು ಪ್ರವಾಹ ಹರಿಯುತ್ತಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೆÇೀಕ್ಲು- ವೀರಾಜಪೇಟೆ ಮುಖ್ಯ ರಸ್ತೆಯ ಕೋಟೇರಿ ಮತ್ತು ಕಕ್ಕಬ್ಬೆಯಲ್ಲಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವ್ಯಾಪ್ತಿಯಲ್ಲಿ ಯಾವದೇ ಖಾಸಾಗಿ ಹಾಗೂ ಸಾರಿಗೆ ಬಸ್‍ಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಖಾಸಾಗಿ ವಾಹನಗಳು ಮಾತ್ರ ಅಲ್ಲಲ್ಲಿ ಓಡಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ನಾಪೆÇೀಕ್ಲು ಪಟ್ಟಣದಿಂದ ಬಲ್ಲಮಾವಟಿ ಗ್ರಾಮದವರೆಗೆ ಮಾತ್ರ ವಾಹನ ಓಡಾಡುತ್ತಿರುವ ಬಗ್ಗೆ ತಿಳಿದುಬಂದಿದೆ.
ಪರಿಹಾರ ಕೇಂದ್ರ : ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರವಾಹ ಉಂಟಾದ ಹಿನ್ನಲೆಯಲ್ಲಿ ಚೆರಿಯಪರಂಬು ಕಾವೇರಿ ನದಿ ತೀರದಲ್ಲಿ ವಾಸವಿದ್ದ 33 ಮಂದಿಯನ್ನು ನಾಪೋಕ್ಲು ಜೂನಿಯರ್ ಕಾಲೇಜಿನ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ಸಂಕಷ್ಟದಲ್ಲಿ ಸಿಲುಕಿದವರನ್ನು ರಕ್ಷಿಸಲು ಐಆರ್‍ಡಿಎಫ್‍ನ ಮೂರು ತಂಡ ಸನ್ನದ್ಧವಾಗಿದೆ.
ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡು ಗ್ರಾಮದಲ್ಲಿ ನಾಲ್ಕು ಕುಟುಂಬಗಳು ಜಲ ದಿಗ್ಭಂದನಕ್ಕೆ ಒಳಗಾಗಿವೆ ಎಂದು ಮಾಜಿ ಸೈನಿಕ ಪಾಡೆಯಂಡ ಶಂಭು ‘ಶಕ್ತಿ’ಗೆ ತಿಳಿಸಿದ್ದಾರೆ.
ಕಕ್ಕಬ್ಬೆ ಹೊಳೆಯಲ್ಲಿ ಕಳೆದ 20 ವರ್ಷಗಳಿಂದ ಈ ವರ್ಷ ಅತಿ ಹೆಚ್ಚಿನ ಪ್ರವಾಹ ಬಂದಿರುವದಾಗಿ ನಿವೃತ್ತ ಶಿಕ್ಷಕ ಕೈಬುಲಿರ ಪೂವಪ್ಪ ತಿಳಿಸಿದ್ದಾರೆ.
ಕತ್ತಲೆಯಲ್ಲಿ ನಾಪೆÇೀಕ್ಲು: ಕಳೆದ ಮೂರು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿಕೊಂಡಿದೆ. ಎಲ್ಲಿ ಹೋದರೂ ಮರದ ಕೊಂಬೆ ಬಿದ್ದು, ಮರ ಬಿದ್ದು ವಿದ್ಯುತ್ ಕಂಬಗಳು, ತಂತಿಗಳು ರಸ್ತೆಯಲ್ಲಿ ಬಿದ್ದಿರುವದು ಕಂಡುಬರುತ್ತಿದೆ. ಅದರೊಂದಿಗೆ ಬಿಎಸ್‍ಎನ್‍ಎಲ್, ಜಿಯೋ ನೆಟ್‍ವರ್ಕ್ ಇಲ್ಲದಿರುವದು ಸಾರ್ವಜನಿಕರಿಗೆ ತೊಂದರೆಯನ್ನುಂಟುಮಾಡಿದೆ.
22.50 ಇಂಚು ಮಳೆ : ಕಕ್ಕಬೆ - ನಾಲಡಿ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 22.50 ಇಂಚು ಮಳೆಯಗಿದೆ ಎಂದು ಪೊನ್ನೋಳನ ರಾಜು ತಿಳಿಸಿದ್ದಾರೆ. ನಾಲ್ಕನಾಡು ಅರಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಪಾಲೂರು ಹರಿಶ್ಚಂದ್ರ ದೇವಾಲಯ ಜಲಾವೃತಗೊಂಡಿದೆ.
-ಪಿ.ವಿ.ಪ್ರಭಾಕರ್, ದುಗ್ಗಳ ಸದಾನಂದ