ಚೆಟ್ಟಳ್ಳಿ, ಆ. 8: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ–ಶ್ರೀಮಂಗಲ ಗ್ರಾಮದ ಬ್ಯಾರಂಗಿ ಬೆಟ್ಟದಲ್ಲಿರುವ ಮಣಿ ಹಾಗೂ ರವಿಕುಮಾರ್ರವರ ವಾಸದ ಮನೆಗಳ ಮುಂಭಾಗದಲ್ಲಿರುವ ಬರೆಯು ಮಳೆಗೆ ಜರೆದಿದೆ. ಮಳೆ – ಗಾಳಿಗೆ ಮನೆಗಳು ಸಂಪೂರ್ಣವಾಗಿ ಕುಸಿದು ಬೀಳಬಹುದಾದ ಅಪಾಯಕಾರಿ ಸ್ಥಿತಿಯಲ್ಲಿದ್ದುದರಿಂದ ನಿನ್ನೆ ದಿನ ಕಂದಾಯ ಇಲಾಖೆಯ ವತಿಯಿಂದ ಈ ಮನೆಗಳ ಕುಟುಂಬಸ್ಥರನ್ನು ಸ್ಥಳಾಂತರಿಸಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಹೋಬಳಿ ಉಪ ತಹಶೀಲ್ದಾರ್ ಶಿವಪ್ಪ, ಗ್ರಾಮ ಲೆಕ್ಕಾಧಿಕಾರಿ ನಸೀಮ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಚಂದ್ರಶೇಖರ್, ಪ್ರಶಾಂತ್, ಶಾಹಿರ, ಗ್ರಾಮ ಸಹಾಯಕರಾದ ಸುಶಿಲ ಹಾಜರಿದ್ದರು. -ಇಸ್ಮಾಯಿಲ್