ಪಾಲಿಬೆಟ್ಟ, ಆ. 8: ಇಲ್ಲಿಗೆ ಸಮೀಪದ ಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಲ್ಲುಕೋರೆಯಲ್ಲಿ ಭಾರೀ ಮಳೆಗೆ ಬೈರ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ವಿಪರೀತ ಮಳೆಯಾಗುತ್ತಿದ್ದು, ಅಪಾಯ ತಲೆದೋರುವ ಸನ್ನಿವೇಶವಿ ರುವದರಿಂದ ಸ್ಥಳಕ್ಕೆ ಜಿ.ಪಂ. ಸದಸ್ಯ ವಿಜುಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ತಹಶೀಲ್ದಾರ ರನ್ನು ಸಂಪರ್ಕಿಸಿ ನಾಲ್ಕು ಕುಟುಂಬ ಗಳನ್ನು ಪಕ್ಕದ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
-ಪುತ್ತಂ ಪ್ರದೀಪ್