ಸಿದ್ದಾಪುರ, ಆ. 7: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಕರಡಿಗೋಡಿನ 15 ಮನೆಗಳು ಜಲಾವೃತಗೊಂಡಿದ್ದು, 15 ಕುಟುಂಬಗಳನ್ನು ಸ್ಥಳಾಂತರಗೊಳಿಸ ಲಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಯು ಸಮುದ್ರದಂತೆ ಗೋಚರಿಸುತ್ತಿದೆ. ಪ್ರವಾಹದ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಕರಡಿಗೋಡಿನ ಇಳಿಜಾರು ಪ್ರದೇಶದ ನದಿದಡದ 15 ಮನೆಗಳು ಜಲಾವೃತ ಗೊಂಡಿವೆ. ಅಪಾಯದಲ್ಲಿರುವ ಕುಟುಂಬಗಳನ್ನು ಕರಡಿಗೋಡಿನ ಸರಕಾರಿ ಶಾಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ತೆರೆಯಲಾ ಗಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕರಡಿಗೋಡು ಪ್ರವಾಹ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕರಡಿಗೋಡು ಪ್ರವಾಹ ಪೀಡಿತ ಪ್ರದೇಶಗಳಿಗೆ ವೀರಾಜಪೇಟೆ ತಹಶೀಲ್ದಾರ್ ಪುರಂದರ ಹಾಗೂ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ನಾಗೇಶ್ ರಾವ್, ಗ್ರಾಮಲೆಕ್ಕಿಗ ಓಮಪ್ಪ ಬಣಕಾರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದರು. ಅಲ್ಲದೆ, ನದಿದಡದಲ್ಲಿ ಪ್ರವಾಹ ನೀರು ಏರಿಕೆಯಾಗುತ್ತಿದ್ದು, ಪರಿಹಾರ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಿದರು. ಪ್ರವಾಹದಿಂದಾಗಿ

(ಮೊದಲ ಪುಟದಿಂದ) ನದಿದಡದ ನಿವಾಸಿಗಳು ಸ್ಥಳೀಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ಕಂದಾಯ ಇಲಾಖೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವದೆಂದು ತಹಶೀಲ್ದಾರ್ ಪುರಂದರ ನದಿದಡದ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪರಿಹಾರ ಕೇಂದ್ರದಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.

ಕರಡಿಗೋಡುವಿನಲ್ಲಿ ಪ್ರವಾಹದ ನೀರು ಏರಿಕೆಯಾದಂತೆ ನದಿದಡವು ಕುಸಿಯುತ್ತಿದೆ. ನದಿದಡದಲ್ಲಿದ್ದ ಬಿದಿರುಗಳು ನೀರಿನ ಹೊಡೆತಕ್ಕೆ ಕುಸಿದು ನೀರು ಪಾಲಾಗಿವೆ. ನದಿದಡದ ನಿವಾಸಿಗಳ ಮನೆಗಳು ಬಿರುಕುಬಿಟ್ಟಿದ್ದು, ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಪ್ರವಾಹದಿಂದಾಗಿ ಸಿದ್ದಾಪುರ- ಕರಡಿಗೋಡು ರಸ್ತೆಯು ಜಲಾವೃತಗೊಂಡಿದೆ.

ಅಲ್ಲದೆ, ಕರಡಿಗೋಡು ರಸ್ತೆಯು ಜಲಾವೃತಗೊಂಡಿದೆ. ಅಲ್ಲದೆ ಕರಡಿಗೋಡು - ಚಿಕ್ಕನಳ್ಳಿ ಪೈಸಾರಿಯ ಕಿರು ಸೇತುವೆ ನೀರಿನಲ್ಲಿ ಸಂಪೂರ್ಣ ಮುಳುಗಡೆಗೊಂಡಿದೆ.

ಕಾವೇರಿ ನದಿಯಲ್ಲಿ ನೀರು ಏರಿಕೆಯಾಗಿ ಪ್ರವಾಹದ ನೀರು ಸೇತುವೆ ಸಮೀಪದಲ್ಲಿರುವ ಸಿ.ಕೆ. ಪೂವಯ್ಯ ಅವರಿಗೆ ಸೇರಿದ ನಾಟಿ ಮಾಡಿದ ಗದ್ದೆಯು ಸಂಪೂರ್ಣ ಜಲಾವೃತಗೊಂಡಿದೆ. ಕೂಡುಗದ್ದೆಯಲ್ಲಿ ನೀರು ಏರಿಕೆಯಾಗಿ ನದಿದಡದವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ನೆಲ್ಯಹುದಿಕೇರಿ ವ್ಯಾಪ್ತಿಯ ಬರಡಿ, ಬೆಟ್ಟದಕಾಡು, ಕುಂಬಾರಗುಂಡಿ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕುಂಬಾರಗುಂಡಿಯ ನಿವಾಸಿ ಬಾಬು ಎಂಬವರ ಮನೆಯ ಗೋಡೆ ಕುಸಿದಿದೆ. ಸ್ಥಳಕ್ಕೆ ಕುಶಾಲನಗರ ಹೋಬಳಿ ಉಪತಹಶೀಲ್ದಾರ್ ಚಿನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್ ಭೇಟಿ ನೀಡಿ ಮಹಜರು ನಡೆಸಿದರು. ನೆಲ್ಯಹುದಿಕೇರಿಯ ಬೆಟ್ಟದಕಾಡು ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಬೆಟ್ಟದಕಾಡುವಿನ ಅಪಾಯದಲ್ಲಿರುವ 4 ಕುಟುಂಬಗಳನ್ನು ಸ್ಥಳೀಯ ಅಂಗನವಾಡಿಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಗೊಳಿಸಲಾಗಿದೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾಮಗಳಲ್ಲಿ ಕಂದಾಯ ಇಲಾಖಾಧಿಕಾರಿಗಳು ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. - ವಾಸು