ಮಡಿಕೇರಿ, ಆ. 7: ಮುಕ್ಕೋಡ್ಲು ಗ್ರಾಮದಲ್ಲಿ ವಿದ್ಯುತ್ ಇಲ್ಲದಿರುವಾಗ ಬಿ.ಎಸ್.ಎನ್.ಎಲ್. ಸಂಪರ್ಕ ಕಡಿತಗೊಳ್ಳುತ್ತಿದ್ದು, ಈ ಬಗ್ಗೆ ಮುಕ್ಕೋಡ್ಲುವಿನ ಬಿ.ಎಸ್.ಎನ್.ಎಲ್. ಎಕ್ಸ್‍ಚೇಂಜ್ ಸಿಬ್ಬಂದಿಯನ್ನು ಕೇಳಿದಾಗ ಡಿಸೇಲ್ ಅಭಾವ ಇರುವದಾಗಿ ತಿಳಿಸಿದ್ದಾರೆ.
ಕಳೆದ ಬಾರಿಯ ಮಳೆಗಾಲದಲ್ಲಿ ಬಿ.ಎಸ್.ಎನ್.ಎಲ್. ಸಂಪರ್ಕ ಕಡಿತಗೊಂಡಿರುವದ ರಿಂದ ಅಲ್ಲಿನ ನಿವಾಸಿಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ತೊಂದರೆಯಾಗಿತ್ತು. ಪ್ರಸ್ತುತವೂ ವಿಪರಿತ ಮಳೆ ಸುರಿಯುತ್ತಿರುವದರಿಂದ ಬಿ.ಎಸ್.ಎನ್.ಎಲ್. ಟವರ್ ಕಾರ್ಯನಿರ್ವಹಿಸುವದು ಅವಶ್ಯವಾಗಿರುತ್ತದೆ. ಅದ್ದರಿಂದ ತುರ್ತಾಗಿ ಡಿಸೇಲ್ ಒದಗಿಸಿ, ನಿರಂತರವಾಗಿ ಬಿ.ಎಸ್.ಎನ್.ಎಲ್. ಸಂಪರ್ಕ ಚಾಲ್ತಿಯಲ್ಲಿ ಇರುವಂತೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಅವರಿಗೆ ಪತ್ರ ಬರೆದಿದ್ದಾರೆ.