ವೀರಾಜಪೇಟೆ, ಆ. 7: ಭಾರೀ ಮಳೆಯ ಕಾರಣ, ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುತ್ತಿದ್ದ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿದ್ದ ಮೂಲ ಸ್ಥಾವರ ನೀರಿನಿಂದ ಮುಳುಗಿದ್ದು, ತಾ. 10ರ ತನಕ ಪಟ್ಟಣಕ್ಕೆ ನೀರು ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.