ಮಡಿಕೇರಿ, ಆ. 6: ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್‍ಎನ್‍ಎಲ್) ವತಿಯಿಂದ ನೂತನವಾಗಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ಕ್ರಮ ಪ್ರಾರಂಭಿಸ ಲಾಗಿದ್ದು, ಸಾರ್ವ ಜನಿಕರು ಇದರ ಸದುಪ ಯೋಗ ಪಡೆದುಕೊಳ್ಳ ಬಹುದಾಗಿದೆ. ಮಡಿಕೇರಿಯ ಅಂಚೆಕಚೇರಿ ಬಳಿ ಇರುವ ಗ್ರಾಹಕ ಸೇವಾ ಕೇಂದ್ರದಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಇತ್ತೀಚೆಗೆ ಬಿಎಸ್‍ಎನ್‍ಎಲ್‍ನ ಟಿ.ಡಿ.ಎಮ್. ಎಂ.ಪಿ. ಸುಬ್ಬಯ್ಯ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಆಧಾರ್‍ನೋಂದಣಿ, ತಿದ್ದುಪಡಿಗಾಗಿ ಗ್ರಾಹಕರು ಕೇಂದ್ರದ ನೆರವು ಪಡೆಯಬಹುದಾಗಿದೆ ಎಂದು ನೂತನ ಟಿ.ಡಿ.ಎಮ್. ಪೊನ್ನುರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.