ಗೋಣಿಕೊಪ್ಪಲು,ಆ.6 : ಬಾಳೆಲೆ ಶ್ರೀರಾಮ ವೃತ್ತದ ಬಳಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಬಾಳೆಲೆ ನಗರ ವ್ಯಾಪ್ತಿಯಲ್ಲಿ ಕಳ್ಳತನ, ಅಪರಿಚಿತರ ಓಡಾಟ ಹಾಗೂ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಮತ್ತಿತರರು ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಡಾ.ಸುಮನ್ ಡಿ.ಪಿ. ಅವರಿಗೆ ಒಟ್ಟು ಮೂರು ಸಿಸಿ ಕ್ಯಾಮೆರಾ ಅಳವಡಿಕೆ ಅಗತ್ಯತೆ ಬಗ್ಗೆ ಮನವಿ ಮಾಡಿದ್ದು, ಇದೀಗ ಇಲ್ಲಿನ ಶ್ರೀರಾಮ ವೃತ್ತದ ಸಮೀಪ ಒಂದು ಸಿಸಿಕ್ಯಾಮೆರಾ ಅಳವಡಿಸಲಾಗಿದೆ.
ಪೆÇನ್ನಂಪೇಟೆ ಪೆÇಲೀಸ್ ಉಪಠಾಣೆ ಬಾಳೆಲೆಯಲ್ಲಿದ್ದು, ಶೀಘ್ರವಾಗಿ ಮತ್ತೆರಡು ಸಿಸಿ ಕ್ಯಾಮೆರಾ ಅಳವಡಿಸುವ ಭರವಸೆಯನ್ನು ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಮಹೇಶ್ ನೀಡಿರುವದಾಗಿ ಸತೀಶ್ ದೇವಯ್ಯ ತಿಳಿಸಿದ್ದಾರೆ.