ಗೋಣಿಕೊಪ್ಪ ವರದಿ, ಆ. 5 : ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ರಾಗಿ ಕೆ.ಎಚ್. ಆದಿತ್ಯಾ ಅಧಿಕಾರ ಪಡೆದುಕೊಂಡರು. ಅಲ್ಲಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ ಸಲಹೆಗಾರ ಡಾ. ಶಿವಣ್ಣ ಪದಗ್ರಹಣ ಬೋಧಿಸಿದರು.
ಕಾರ್ಯದರ್ಶಿಯಾಗಿ ಭರತ್ರಾಮ್ರೈ, ಕಾರ್ಯವಾಹಕ ಕಾರ್ಯದರ್ಶಿಯಾಗಿ ಬಿ.ಬಿ. ಮಾದಪ್ಪ, ಖಜಾಂಜಿಯಾಗಿ ಡಾ. ಲವಿನ್ ಚೆಂಗಪ್ಪ, ಸಾರ್ಜೆಂಟ್ ಆಗಿ ಚೇತನ್ ಮುತ್ತಣ್ಣ, ಕ್ಲಬ್ ಸೇವಾ ನಿರ್ದೇಶಕರಾಗಿ ಪೃಥ್ವಿ ಮಾದಯ್ಯ, ಸಮುದಾಯ ಸೇವಾ ನಿರ್ದೇಶಕರಾಗಿ ವಿಕಾರ್ಖಾನ್, ಅಂತರ್ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕರಾಗಿ ಡಾ. ನರಸಿಂಹನ್, ವೃತ್ತಿಪರ ನಿರ್ದೇಶಕರಾಗಿ ಬನ್ಸಿ ಪೂವಣ್ಣ, ಯುವ ಸೇವಾ ನಿರ್ದೇಶಕರಾಗಿ ಪ್ರವೀಣ್ ಚೆಂಗಪ್ಪ, ಪಲ್ಸ್ ಪೋಲಿಯೋ ಯೋಜನೆ ಮುಖ್ಯಸ್ಥರಾಗಿ ಡಾ. ಉತ್ತಪ್ಪ, ಟಿಆರ್ಎಫ್ ಮುಖ್ಯಸ್ಥರಾಗಿ ಪಿ. ಎಸ್. ಅಯ್ಯಣ್ಣ, ಜಿಲ್ಲಾ ಯೋಜನಾ ಮುಖ್ಯಸ್ಥರಾಗಿ ಬಿ. ಬಿ. ಮಾದಪ್ಪ, ತರಬೇತಿ ಮುಖ್ಯಸ್ಥರಾಗಿ ಸತೀಶ್ ಗಣಪತಿ, ವಿನ್ಸ್ ಮುಖ್ಯಸ್ಥ ರಾಗಿ ಶಾಂತರಾಮ್ ಕಾಮತ್, ಸದಸ್ಯತ್ವ ಅಭಿವೃದ್ಧಿ ಸಮಿತಿ ಮುಖ್ಯಸ್ಥ ರಾಗಿ ರವಿ ಪದಗ್ರಹಣ ಸ್ವೀಕರಿಸಿದರು.
ಈ ಸಂದರ್ಭ ರೋಟರಿ ಸಹಾಯಕ ಗವರ್ನರ್ ಪಿ. ನಾಗೇಶ್, ವಲಯ ಕಾರ್ಯದರ್ಶಿ ಎಚ್. ಟಿ. ಅನಿಲ್, ವಲಯ ಲೆಫ್ಟಿನೆಂಟ್ ಡಾ. ನರಸಿಂಹನ್, ನಿರ್ಗಮಿತ ಅಧ್ಯಕ್ಷ ರವಿ, ಕಾರ್ಯದರ್ಶಿ ಚೇತನ್ ಮುತ್ತಣ್ಣ ಉಪಸ್ಥಿತರಿದ್ದರು.