ಸಿದ್ದಾಪುರ, ಆ. 5: ಅನುಮತಿ ಪಡೆಯದೆ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಗುಂಡಿ ತೆಗೆಯುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಪರಿಶೀಲಿಸಿ, ಗುಂಡಿ ಮುಚ್ಚಿಸಲಾಯಿತು.
ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ಖಾಸಗಿ ಕಂಪೆನಿಯ ಕೇಬಲ್ ಹಾಕಲು ಪಿ.ಡಬ್ಲ್ಯೂ.ಡಿ. ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಗುಂಡಿ ತೋಡುತ್ತಿರುವ ಮಾಹಿತಿಯ ಮೇರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸುಬ್ಬಯ್ಯ, ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಕಾಮಗಾರಿಯನ್ನು ಸ್ಥಗಿತಗೊಳಿಸಿದರು. ಗುಂಡಿಯನ್ನು ಮುಚ್ಚಿಸಲಾಗಿದ್ದು, ಕಂಪೆನಿಗೆ ನೋಟೀಸ್ ನೀಡಲಾಗುವದು ಎಂದು ಸುಬ್ಬಯ್ಯ ತಿಳಿಸಿದ್ದಾರೆ.