ಮಡಿಕೇರಿ,ಆ.5: ಮೈಸೂರಿನ ಆರ್.ಡಿ.ಸಿ ನೃತ್ಯ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್ಸ್ ಆಫ್ ಡ್ಯಾನ್ಸ್ ಕರ್ನಾಟಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಗೆ ಪ್ರಥಮ ಬಹುಮಾನ ಲಭಿಸಿದೆ.

ಮೈಸೂರಿನ ಜಗನ್ ಮೋಹನ್ ಪ್ಯಾಲೇಸ್‍ನಲ್ಲಿ ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, ಈ ಪೈಕಿ ಕಿಂಗ್ಸ್ ಆಫ್ ಕೂರ್ಗ್‍ನ ಕಲಾವಿದರು ಜೂನಿಯರ್ ವಿಭಾಗದಲ್ಲಿ ಪ್ರದರ್ಶಿಸಿದ ನೃತ್ಯಕ್ಕೆ ಮೊದಲ ಬಹುಮಾನ ಲಭ್ಯವಾಗಿದೆ. ಅಲ್ಲದೆ ಸಬ್ ಜೂನಿಯರ್ ತಂಡದ ಹಾಗೂ ಸೋಲೋ ಹಾಗೂ ಕಪಲ್ಸ್ ವಿಭಾಗÀದಲ್ಲಿ ಕಿಂಗ್ಸ್ ಕಲಾವಿದರ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ತರಬೇತುದಾರ ಮಹೇಶ್ ಅವರ ನೇತೃತ್ವದಲ್ಲಿ ತಂಡ ಕಲಾವಿದರು ಪಾಲ್ಗೊಂಡಿದ್ದರು.

ಸಿನಿಮಾ ರಂಗದ ನೃತ್ಯ ನಿರ್ದೇಶಕರಾದ ಸಂಜೀವ್ ಕೆ.ಕುಮಾರ್, ಮೋಹನ್, ಸಂತೋಷ್ ಕುಮಾರ್, ಗಣೇಶ್ ಮಲ್ಲಪ್ಪ, ಪ್ರಿಯಾಂಕ ಮುಖ್ಯ ಅತಿಥಗಳಾಗಿ ಭಾಗವಹಿಸಿದ್ದರು.

ಬೆಂಗಳೂರಿನ ನೃತ್ಯ ಸಂಯೋಜಕರಾದ ಜಗ್ಗು ಮಾಸ್ಟರ್ ಹಾಗೂ ರಾಜು ಮಾಸ್ಟರ್ ತೀರ್ಪುಗಾರರಾಗಿದ್ದರು. ಇದರೊಂದಿಗೆ ಫ್ಯಾಷನ್ ಶೋ ಕೂಡ ನಡೆಯಿತು. ಪುಟಾಣಿಗಳಿಂದ ಹಿಡಿದು ಯುವಕ –ಯುವತಿಯರು ಭಾಗವಹಿಸಿದ್ದರು.