ನಾಪೆÉÇೀಕ್ಲು, ಆ. 5: ಸ್ಥಳೀಯ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ವನ್ನು ಅದ್ಧೂರಿಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಇ. ರಜಾಕ್ ಹೇಳಿದರು. ಸಂಘದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾ. 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಳೇ ತಾಲೂಕು ರಸ್ತೆಯ ಪೆಟ್ರೋಲ್ ಪಂಪ್ನಿಂದ ಪಟ್ಟಣದ ಸಂಘದ ಕಚೇರಿಯವರೆಗೆ ಆಟೋ ರಿಕ್ಷಾಗಳ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಧ್ವಜಾರೋಹಣ ನಡೆಯಲಿದ್ದು, ಧ್ವಜಾರೋಹಣವನ್ನು ನಿವೃತ್ತ ಸೇನಾಧಿಕಾರಿ ಕೊಂಡೀರ ನಾಣಯ್ಯ ನೆರವೇರಿಸುವರು. ಈ ಸಂದರ್ಭ ನಾಣಯ್ಯ ಅವರನ್ನು s ಸಂಘದ ವತಿಯಿಂದ ಸನ್ಮಾನಿಸಲಾಗುವದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಕೆ.ಕೆ. ಲೋಕೇಶ್. ಖಜಾಂಚಿ ಕುಂಡ್ಯೋಳಂಡ ಸಂಪತ್ ದೇವಯ್ಯ, ಸಹಕಾರ್ಯದರ್ಶಿ ಜಾಕಿರ್, ಉಪಾಧ್ಯಕ್ಷ ನಾಗರಾಜ್ ಇದ್ದರು.