ವೀರಾಜಪೇಟೆ, ಆ. 4: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘ, ಅಮ್ಮತ್ತಿ ರ್ಯೆತ ಸಂಘ, ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಇಂದು ಪಟ್ಟಣದ ಗಡಿಯಾರ ಕಂಬದ ಬಳಿ ಇತ್ತೀಚಿಗೆ ನಿಧನ ಹೊಂದಿದ ಚಿಕ್ಕಮಗಳೂರಿನ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ್ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದೇ ಸಂದÀರ್ಭ ಮಾಜಿ ಸ್ಯೆನಿಕರ ಸಂಘದ ಉಪಾಧ್ಯಕ್ಷ ಚಪ್ಪಂಡ ಹರೀಶ್ ಮಾತನಾಡಿದರು.

ಇದೇ ಸಂಧರ್ಭದಲ್ಲಿ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ನಿರ್ದೆಶಕರುಗಳಾದ ಮುಂಡ್ಯೋಳಂಡ ಸುರೇಶ್, ರಾಜಾ ಚಂದ್ರಶೇಖರ್, ಮಾದೇಯಂಡ ಹ್ಯಾರಿ, ಕೂತಂಡ ನಾಣಯ್ಯ, ಉದ್ಯಮಿ ಕೋಲತಂಡ ಬೋಪಯ್ಯ ಮತ್ತಿತರರು ಪಾಲ್ಗೊಂಡಿದ್ದರು.