ಮಡಿಕೇರಿ, ಆ. 4: ಮುಂಗಾರುವಿನ ಆಶ್ಲೇಷ ಮಳೆಯು ನಿನ್ನೆ ಅಡಿಯಿರಿಸಿದ್ದು; ದ್ವಿತೀಯ ದಿನವಾದ ಇಂದು ಜಿಲ್ಲೆಯಾದ್ಯಂತ ಆಶಾದಾಯಕವಾಗಿ ಬೀಳ ಮಡಿಕೇರಿ, ಆ. 4: ಮುಂಗಾರುವಿನ ಆಶ್ಲೇಷ ಮಳೆಯು ನಿನ್ನೆ ಅಡಿಯಿರಿಸಿದ್ದು; ದ್ವಿತೀಯ ದಿನವಾದ ಇಂದು ಜಿಲ್ಲೆಯಾದ್ಯಂತ ಆಶಾದಾಯಕವಾಗಿ ಬೀಳ ಇಂಚು ಮಳೆ ದಾಖಲಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಮಧ್ಯರಾತ್ರಿ ಹಾಗೂ ಇಂದು ಹಗಲು ಉತ್ತಮ ಮಳೆಯಾಗಿದೆ. (ಮೊದಲ ಪುಟದಿಂದ) ಸರಾಸರಿ ಕಳೆದ 24 ಗಂಟೆಗಳಲ್ಲಿ 1.33 ಇಂಚು ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ 1.22 ಇಂಚು ಮಳೆಯಾಗಿದೆ. ಸಂಪಾಜೆ ವ್ಯಾಪ್ತಿಗೆ 0.86 ಇಂಚು ಮಳೆಯೊಂದಿಗೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 2.33 ಇಂಚು ಮಳೆ ದಾಖಲಾಗಿದೆ.ವೀರಾಜಪೇಟೆ ತಾಲೂಕಿನ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು; ಸರಾಸರಿ 1 ಇಂಚು ದಾಖಲಾಗಿದೆ. ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ 2.70 ಇಂಚು ಮಳೆಯಾದರೆ; ಹುದಿಕೇರಿ 1.91 ಇಂಚು, ಶ್ರೀಮಂಗಲ 1.11 ಇಂಚು, ಅಮ್ಮತ್ತಿ 0.86 ಇಂಚು ಹಾಗೂ ಬಾಳೆಲೆ ವ್ಯಾಪ್ತಿಗೆ 0.94 ಇಂಚು ಮಳೆಯಾಗಿದೆ.ಸೋಮವಾರಪೇಟೆ ತಾಲೂಕು ಕೇಂದ್ರ ಹಾಗೂ ಶಾಂತಳ್ಳಿ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಅಲ್ಪಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಸರಾಸರಿ 0.25 ಇಂಚು ಮಾತ್ರ ಮಳೆ ಗೋಚರಿಸಿದೆ. ಒಟ್ಟಿನಲ್ಲಿ ಆಶ್ಲೇಷ ಮಳೆ ದ್ವಿತೀಯ ದಿನದಂದು ಕೆಲವೆಡೆ ರಭಸದಿಂದ ಹಾಗೂ ಇತರೆಡೆ ಅಲ್ಪ ಪ್ರಮಾಣದಲ್ಲಿ ಗೋಚರಿಸಿದೆ.
ಭಾಗಮಂಡಲ ಮಳೆ
ಭಾಗಮಂಡಲಕ್ಕೆ ಪ್ರಸಕ್ತ ಅವಧಿಗೆ 81.6 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 187.40 ಇಂಚು ಹಾಗೂ 2017ರಲ್ಲಿ 106.2 ಇಂಚು ದಾಖಲಾಗಿತ್ತು.
ಸಿದ್ದಾಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ಹಾಗೂ ಕೊಂಡಗೇರಿ ಭಾಗದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮಕೈಗೊಂಡಿರುವದಾಗಿ ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್ ತಿಳಿಸಿದ್ದಾರೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು ಗುಹ್ಯ , ಕೊಂಡಂಗೇರಿ ಗ್ರಾಮಗಳ ನದಿ ದಡಗಳಲ್ಲಿ ವಾಸವಿರುವ ನಿವಾಸಿಗಳಿಗೆ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಕಂದಾಯ ಇಲಾಖೆಯ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ ಎಂದು ಗ್ರಾಮ ಲೆಕ್ಕಿಗ ತಿಳಿಸಿದರು.
ಮನೆಗೆ ನುಗ್ಗಿದ ನೀರು
ಗೋಣಿಕೊಪ್ಪ ವರದಿ: ಶನಿವಾರ ಹಾಗೂ ಭಾನುವಾರ ಸುರಿದ ಮಳೆಯಿಂದ ಗೋಣಿಕೊಪ್ಪ ವೆಂಕಟಪ್ಪ ಬಡಾವಣೆಯಲ್ಲಿ ನೀರು ಮನೆಗೆ ನುಗ್ಗಿ ಆತಂಕ ಮೂಡಿಸಿತ್ತು.
ಬಡಾವಣೆ ಮೂಲಕ ಹರಿಯುವ ತೋಡು ಉಕ್ಕಿದ ಪರಿಣಾಮ ಬಡಾವಣೆಯ 7 ಮನೆಗಳಿಗೆ ನೀರು ನುಗ್ಗಿ ಆತಂಕ ಮೂಡಿಸಿತು. ಭಾನುವಾರ ಮುಂಜಾನೆ ಮನೆಯಿಂದ ಹೊರ ಬಂದವರಿಗೆ ಪ್ರವಾಹದಂತ ಅನುಭವವಾಯಿತು. ಮನೆಯ ಆವರಣ ಸೇರಿದಂತೆ, ಮನೆಯ ಒಳಗೂ ನೀರು ನುಗ್ಗಿದ ಪರಿಣಾಮ ಜನರು ಭಯಭೀತರಾದರು. ನಂತರ ಬೆ. 10 ಗಂಟೆ ಸುಮಾರಿಗೆ ನೀರಿನ ಮಟ್ಟ ತಗ್ಗಿತು. ಮಳೆ ಕೂಡ ಕಡಿಮೆಯಾದ ಕಾರಣ ಜನರು ಆತಂಕದಿಂದ ಹೊರ ಬಂದರು.
ತೋಡಿನ ಬದಿಗಳಲ್ಲಿರುವ ಕಾಡು, ಹೂಳು ತೆಗೆಯದ ಕಾರಣ ನೀರು ಬಡಾವಣೆಯತ್ತ ಹರಿಯುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಮುಂಜಾಗೃತಾ ಕ್ರಮಕೈಗೊಂಡು ಹೂಳು ತೆಗೆಯಬೇಕಿತ್ತು ಎಂದು ಸ್ಥಳೀಯರು ಒತ್ತಾಯಿಸಿದರು.ಗೋಣಿಕೊಪ್ಪದ ಮೂಲಕ ಹರಿಯುವ ಕೀರೆಹೊಳೆಯಲ್ಲಿ ಸಾಧಾರಣ ನೀರು ಹರಿಯುತ್ತಿದೆ. ಹೊಳೆಯ ಪೂರ್ಣ ಭಾಗದಷ್ಟು ಹೂಳು ತೆಗೆಯದ ಕಾರಣ ಹೆಚ್ಚು ಮಳೆಯಾದರೆ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಶ್ರೀಮಂಗಲ: ದಕ್ಷಿಣ ಕೊಡಗಿನಾದ್ಯಂತ ಶನಿವಾರ ರಾತ್ರಿ ಮತ್ತು ಭಾನುವಾರ ಧಾರಾಕಾರ ಮಳೆಯಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು; ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಶ್ರೀಮಂಗಲ, ಹುದಿಕೇರಿ, ಬಿರುನಾಣಿ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವೇಳೆ ಗುಡುಗು ಸಹಿತ ಮಳೆ ಸುರಿಯಿತು. ಗುಡುಗು ಸಹಿತ ಮಳೆಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಈ ವ್ಯಾಪ್ತಿಯ ಲಕ್ಷ್ಮಣತೀರ್ಥ ಮತ್ತು ಕಕ್ಕಟ್‍ಪೊಳೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಭತ್ತದ ಗದ್ದೆಗಳಲ್ಲಿ ಹೆಚ್ಚಿನ ನೀರು ನಿಂತು ಜಲಾವೃತಗೊಂಡಿದ್ದು; ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಬಿರುನಾಣಿ - ಹುದಿಕೇರಿ ನಡುವಿನ ಹೈಸೊಡ್ಲೂರು ಬಳಿ ರಸ್ತೆಗೆ ಬರೆ ಕುಸಿದಿದ್ದು, ಮಳೆ ಮುಂದುವರೆದರೆ ಮತ್ತಷ್ಟು ಕುಸಿಯುವ ಆತಂಕವಿದೆ.
ಆಲೂರುಸಿದ್ದಾಪುರ: ಶನಿವಾರಸಂತೆ ಹಾಗೂ ಅರಕಲಗೂಡು ಸಂಚರಿಸುವ ಮಾರ್ಗದ ಬೆಳ್ಳಾರಳ್ಳಿ ತಿರುವಿನಲ್ಲಿ ರಸ್ತೆ ಬದಿ ಬೃಹತ್ ಗಾತ್ರದ ಮರವೊಂದು ಭಾನುವಾರ ಸಂಜೆ ಬೀಸಿದ ಭಾರೀ ಗಾಳಿಗೆ ಬುಡ ಸಮೇತವಾಗಿ ಬಿದ್ದು ರಸ್ತೆ ಸಂಚಾರಕ್ಕೆ ಅಡೆತಡೆಯಾಯಿತು. ನಂತರ ಗ್ರಾಮಸ್ಥರೇ ಮರವನ್ನು ತೆರವು ಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿದರು.