ಕುಶಾಲನಗರ, ಆ. 4: ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ವತಿಯಿಂದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ನೀಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಕೆ.ಆರ್. ಜಗದೀಶ್ ನೇತೃತ್ವದಲ್ಲಿ ಕಾರ್ಯದರ್ಶಿ ಆರ್.ವಿ. ಸತೀಶ್ ಮತ್ತು ಪದಾಧಿಕಾರಿಗಳು ಪ.ಪಂ. ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿ ವ್ಯಾಪಾರಿಗಳ ಅಧಿನಿಯಮ ಪ್ರಕಾರ ವ್ಯಾಪಾರಕ್ಕೆ ಅನುಮತಿ ಮತ್ತು ಪ್ರಮಾಣಪತ್ರ ಕಲ್ಪಿಸಬೇಕು. ಸರಕಾರದಿಂದ ಒದಗುವ ಸವಲತ್ತುಗಳನ್ನು ಪಂಚಾಯಿತಿ ಮೂಲಕ ಕಲ್ಪಿಸಬೇಕು. ಮತ್ತಿತರ ಬೇಡಿಕೆಗಳನ್ನು ಸೇರಿದಂತೆ ಮನವಿ ಪತ್ರ ಸಲ್ಲಿಸಿದರು.
ಮಾಧ್ಯಮ ಸಲಹೆಗಾರ ಕೆ.ಟಿ. ಶ್ರೀನಿವಾಸ್, ಪುಟ್ಟಮಾದು, ನಾಗರಾಜು, ರವಿ ಮತ್ತಿತರರು ಇದ್ದರು.