ಚೆಟ್ಟಳ್ಳಿ, ಆ. 4: ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜ್ಯುಕೇಶನಲ್ ಅಕಾಡೆಮಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನಜಾತ್ ಸುನ್ನಿ ಮದರಸದಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ದಾರುನ್ನಜಾತ್ ಎಜ್ಯುಕೇಶನಲ್ ಅಕಾಡೆಮಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ವಹಿಸಿದ್ದರು. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾರುನ್ನಜಾತ್ ಮದರಸ ಮುಖ್ಯೋಪಾಧ್ಯಾಯ ಝುಬೈರ್ ಸಅದಿ ಮಾತನಾಡಿದರು. ಈ ಸಂದರ್ಭ ಮದರಸಾ ಸೆಕ್ರೆಟರಿ ಜಂಶಾದ್ ಸಖಾಫಿ, ದಾರುನ್ನಜಾತ್ ಕೇಂದ್ರ ಸಮಿತಿ ಸದಸ್ಯರಾದ ಅಲವೀ ಹಾಜಿ ನೆಲ್ಲಿಹುದಿಕೇರಿ, ದಾರುನ್ನಜಾತ್ ಕೇಂದ್ರ ಸಮಿತಿ ಕಾರ್ಯದರ್ಶಿ ರಶಾದ್ ನೆಲ್ಲಿಹುದಿಕೇರಿ, ಎಸ್.ಎಸ್.ಎಫ್. ರಾಜ್ಯ ಸಮಿತಿ ಸದಸ್ಯ ರಫೀಕ್ ನೆಲ್ಲಿಹುದಿಕೇರಿ ಮುಂತಾದವರು ಉಪಸ್ಥಿತರಿದ್ದರು. ಮದರಸ ಅಧ್ಯಾಪಕ ರಝಾಖ್ ಸಅದಿ ಸ್ವಾಗತಿಸಿ, ಸ್ವಬಾಹ್ ಹಿಮಮಿ ವಂದಿಸಿದರು.