ವೀರಾಜಪೇಟೆ, ಆ.4: ಕೊಡವ ಜನಾಂಗದಲ್ಲಿ ಹಿಂದಿನ ಕಾಲದಲ್ಲಿದ್ದಂತಹ ಒಗ್ಗಟ್ಟು ಆಚಾರ-ವಿಚಾರ, ಪದ್ಧತಿ ಪರಂಪರೆ ಮಾಯವಾಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕು. ಈಚೆಗೆ ಕೊಡವ ಜನಾಂಗದ ಜನಸಂಖ್ಯೆ ಕೂಡ ಕ್ಷೀಣಿಸುತಿರುವದು ಉತ್ತಮ ಬೆಳವಣಿಗೆ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಆಯೋಜಿಸಿದ್ದ "ಕಕ್ಕಡ 18 ನಮ್ಮೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ಮಾಡುವ ಕೆಲಸಗಳು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪ ಆಗಬೇಕು. ಕೊಡವ ಜನಾಂಗ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎನ್ನುವದನ್ನು ಈಗಾಗಲೇ ಜಗತ್ತಿಗೆ ಸಾಬೀತು ಪಡಿಸಿದೆ. ಸಣ್ಣ ಜನಾಂಗವಾದರೂ ರಾಷ್ಟ್ರದಲ್ಲಿ 27 ಕೊಡವರು ಉನ್ನತ ಸ್ಥಾನದಲ್ಲಿದ್ದಾರೆ. ಯಾವುದೇ ಜಾತಿ ಜನಾಂಗವಾಗಿರಲಿ ಅವರವರ ಜಾತಿಯನ್ನು ಪ್ರೀತಿಸುವಂತಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ ಮಾತನಾಡಿ, ಸಂಸ್ಕøತಿ ಪದ್ಧತಿ ಪರಂಪರೆಗಳು ಜೀವಂತವಾಗಿದ್ದರೂ, ಅವುಗಳನ್ನು ನಾವು ಮರೆಯುತ್ತಿದ್ದೇವೆ. ಕೊಡವ ಜನಾಂಗಕ್ಕೆ ರಾಷ್ಟ್ರ ಹಾಗೂ ಅಂvರ್ರಾಷ್ಟ್ರೀಯ ಮಟ್ಟದಲ್ಲಿ ಗೌರವ ಇದೆ. ಓರ್ವ ಕೊಡವ ಹೆಣ್ಣು ಮಗಳಿಗೆ ಇಂದು ಸಾಮಾಜಿಕ ಜೀವನದಲ್ಲಿ ಎಷ್ಟು ಜವಬ್ದಾರಿ ಇರುತ್ತದೆ ಎಂಬದನ್ನು ಇಂತಹ ಪೊಮ್ಮಕ್ಕಡ ಕೂಟಗಳು ಪರಿಚಯಿಸುತ್ತವೆ ಎಂದರು.
ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಮಾತನಾಡಿ ಸಮುದಾಯದ ಹಬ ್ಬಹರಿದಿನಗಳನ್ನು ನಮ್ಮ ಇಂದಿನ ಹಾಗೂ ಮುಂದಿ&divound; ಯುವÀ ಪೀಳಿಗೆಗೆ ತೋರಿಸಿ ಕೊಡುವ ಕೆಲಸವನ್ನು ನಾವು ಜವಾಬ್ದಾರಿಯಿಂದ ಮಾಡಬೇಕಿದೆ ಎಂದರು.
ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನಿಯಪಂಡ ಕಾಂತಿ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಪಳೆಯಂಡ ಮನು ಸುಬ್ಬಯ್ಯ, ಹಿರಿಯರಾದ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಕುಪ್ಪಂಡ ಪುಷ್ಪಾ ಮುತ್ತಣ್ಣ, ಚಲ್ಮಂಡ ಗೌರಿ ಮೊಣ್ಣಪ್ಪ, ಮನಿಯಪಂಡ ಸತೀಶ್, ಬೊಳ್ಳಕ್ಕ ತಂಡದ ಮುಖ್ಯಸ್ಥೆ ಕುಂಞÂರ ಚಿತ್ರಾ ಮನು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಇವರುಗಳನ್ನು ಸನ್ಮಾನಿಸ ಲಾಯಿತು. ಕಕ್ಕಡ 18 ಅಂಗವಾಗಿ ಬಗೆ ಬಗೆಯ ತಿನಿಸುಗಳು, ಖಾದ್ಯಗಳು ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಬೊಳ್ಳಕ್ಕ ತಂಡದಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ನಿರೂಪಿಸಿದರು.