ಅಯ್ಯಂಗೇರಿ ಗ್ರಾಮ ನಿವಾಸಿ, ಮಾಜಿ ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಆಚಿರ ನಾಣಯ್ಯ (59) ಅವರು ತಾ. 4 ರಂದು ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ತಾ. 5 ರಂದು (ಇಂದು) ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದ್ದು, ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಟಮೂಲತಃ ವೀರಾಜಪೇಟೆ ಬಳಿಯ ಎರಡನೇ ರುದ್ರಗುಪ್ಪೆ ಗ್ರಾಮದ ನಿವಾಸಿಯಾಗಿದ್ದು, ಮೈಸೂರಿನ ರಾಮಕೃಷ್ಣ ನಗರದಲ್ಲಿ ನೆಲೆಸಿದ್ದ ಕೋಲತಂಡ ಕುಶಾಲಪ್ಪ (64) ಅವರು ತಾ:4ರಂದು ನಿಧನ ಹೊಂದಿದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 5 ರಂದು (ಇಂದು) ಮೈಸೂರಿನ ಗೋಕುಲಂ ಸ್ಯಾನಿಟೋರಿಯಂನಲ್ಲಿ ಜರುಗಲಿದೆ.
ಟಕಕ್ಕಬೆ ಯವಕಪಾಡಿ ಗ್ರಾಮ ನಿವಾಸಿ, ಅರೆಯಡ ದಿ. ಬೆಳ್ಯಪ್ಪ ಅವರ ಪತ್ನಿ ಮಾಚವ್ವ (ಕಿಟ್ಟಿ-82) (ತಾಮನೆ - ಪಾಂಡಂಡ) ಅವರು ತಾ. 4 ರಂದು ನಿಧನರಾದರು. ಅಂತಿಮ ದರ್ಶನ ವೀರಾಜಪೇಟೆ ಕುಕ್ಲೂರುವಿನಲ್ಲಿರುವ ಪುತ್ರ ಹರೀಶ್ ಅವರ ನಿವಾಸದಲ್ಲಿ ನಡೆಯಲಿದ್ದು, ಅಂತ್ಯಕ್ರಿಯೆ ತಾ. 5 ರಂದು (ಇಂದು) ಅಪರಾಹ್ನ ಯವಕಪಾಡಿಯಲ್ಲಿ ನಡೆಯಲಿದೆ.