‘ಶಕ್ತಿ’ಯ ಸ್ಥಾಪಕ ಸಂಪಾದಕ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಪತ್ನಿ ಈಗಿನ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರ ಮಾತೋಶ್ರೀ ಕಮಲಾವತಿ ಅವರು ಇದೀಗ ಕಣ್ಮರೆಯಾಗಿದ್ದಾರೆ. ಈ ಹಿರಿಯ ಚೇತನ ಸದಾ ಹಸನ್ಮುಖಿ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‍ನ ಮನೆ ಸನಿಹ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಸ್ಥಳೀಯ ವಿಜಯ ವಿನಾಯಕ ದೇಗುಲಕ್ಕೂ ಆಗಮಿಸುತ್ತಿದ್ದ ಇವರು ಎಲ್ಲರನ್ನು ಪ್ರೀತ್ಸಾದರಗಳಿಂದ ಮಾತನಾಡಿಸುತ್ತಿದ್ದುದನ್ನು ಮರೆಯಲಾಗದ್ದು, ದಿವ್ಯಾತ್ಮಕ್ಕೆ ಚಿರಶಾಂತಿ ಸಿಗುವಂತಾಗಲಿ.

- ಅರುಣ್ ಶೆಟ್ಟಿ, ಅಧ್ಯಕ್ಷ ದೇಶಪ್ರೇಮಿ ಯುವಕ ಸಂಘ