ಕುಶಾಲನಗರ, ಆ. 4: ಕುಶಾಲನಗರದ ಪೊಲೀಸ್ ಇಲಾಖೆ ಆಶ್ರಯದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು.

ಬಕ್ರೀದ್ ಹಾಗೂ ಅಖಂಡ ಭಾರತ ಸಂಕಲ್ಪದ ಪಂಜಿನ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿರುವ ಹಿನ್ನಲೆಯಲ್ಲಿ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಆಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಧಾರ್ಮಿಕ ಆಚರಣೆಗಳು, ಕಾರ್ಯಕ್ರಮಗಳ ಸಂದರ್ಭ ಆಯಾ ಧರ್ಮದ ಪ್ರಮುಖರು ಸಾಮರಸ್ಯ ಕದಡದಂತೆ ಎಚ್ಚರವಹಿಸಬೇಕಿದೆ. ಪರಸ್ಪರ ಅವಹೇಳನ, ನಿಂದನೆಗಳಿಗೆ ಅವಕಾಶ ಕಲ್ಪಿಸದಂತೆ ಎಚ್ಚರವಹಿಸು ವದು, ಸಮಾಜದ ಶಾಂತಿ ಕದಡಿದಲ್ಲಿ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಡಿವೈಎಸ್ಪಿ ಮುರಳೀಧರ್ ಎಚ್ಚರಿಸಿದರು.

ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸರ್ವ ಸನ್ನಧ್ದವಾಗಿದೆ ಎಂದರು.

ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮಾತನಾಡಿ, ಪಂಜಿನ ಮೆರವಣಿಗೆ ಆಯೋಜಕರು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.