ಸುಂಟಿಕೊಪ್ಪ, ಆ. 4: ಮನುಷ್ಯನ ಶಾರೀರಿಕ, ಬೌತಿಕ, ಮಾನಸಿಕ ಬೆಳವಣಿಗೆಗೆ ಆರೋಗ್ಯ ಕಾಪಾಡಲು ಕ್ರೀಡೆ ಸಹಕಾರಿಯಾಗಲಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಎ.ಲೋಕೇಶ್ ಹೇಳಿದರು.
ಸಿದ್ದಾಪುರದಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಒಳಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶೆಟಲ್ ಬ್ಯಾಡ್ಮಿಂಟನ್ ಸಿದ್ಧಾಪುರ ಕ್ಲಬ್‍ನ ಸ್ಥಾಪಕ ಸಿ.ಕೆ. ಪೂವಯ್ಯ, ಕಾಫಿ ಬೆಳೆಗಾರ ಉತ್ತಯ್ಯ, ಗುಡ್ಡೆಹೊಸೂರು ಕ್ಷೇತ್ರದ ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ವಾಲ್ನೂರು ತ್ಯಾಗತ್ತೂರು ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್, ನೆಲ್ಯಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಹಕೀಂ, ಮಾಜಿ ಜಿ.ಪಂ. ಸದಸ್ಯ ಎಂ.ಎಸ್. ವೆಂಕಟೇಶ, ವಿ.ಕೆ.ಲೋಕೇಶ್, ಜೋಸೆಫ್ ಶ್ಯಾಂ, ಶ್ರೀನಿವಾಸ್ ಇದ್ದರು.