ಶನಿವಾರಸಂತೆ, ಆ. 4: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಇಂದು ಸಂಜೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ತೆರವುಗೊಳಿಸುತ್ತಿದ್ದಾಗ ಶನಿವಾರಸಂತೆ ಕಡೆಯಿಂದ ಕಾರಿನಲ್ಲಿ ಬಂದು (ಕೆ.ಎ. 13 ಪಿ. 5345) ವ್ಯಕ್ತಿಯೋರ್ವ ನಿಶಾಮತ್ತನಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹುಲುಸೆ ಗ್ರಾಮದ ಮುಖ್ಯರಸ್ತೆಯಲ್ಲಿ ಮಳೆ - ಗಾಳಿಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸುತ್ತಿದ್ದಾಗ ಅರಕಲಗೋಡು ತಾಲೂಕಿನ ನಿಂಗೇ ಗೌಡನಕೊಪ್ಪಲಿನ ವಾಸಿ ಜನಾರ್ಧನ ಆಲಿಯಾಸ್ ಜಗ್ಗ ಎಂಬಾತ ತನ್ನ ಕಾರಿನಲ್ಲಿ ಬಂದು ನಿಶಾಮತನಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ರಿಂದ ಆತನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಲಾಗಿದೆ.