ಚೆಟ್ಟಳ್ಳಿ, ಆ. 3: ಉತ್ಸಾಹಿ ಯುವಕರ ತಂಡ ತಮ್ಮ ತಮ್ಮ ಬೈಕ್‍ನೊಂದಿಗೆ ಕಾಡುಮೇಡು ಬೆಟ್ಟಗುಡ್ಡ ಕೆಸರಿನ ರಸ್ತೆಯ ನಡುವೆ ‘ದ ಡರ್ಟಿರೈಡ್’ ಎಂಬ ಸಾಹಸ ಮಯ ಬೈಕ್‍ರೈಡ್ ನಡೆಸಿದರು.
ಸೌತ್ ಕೂರ್ಗ್ ಆಫ್ ರೋಡರ್ಸ್ ಎಂಬ ಯುವಕರ ತಂಡ ಮಳೆಗಾಲದಲ್ಲಿ ಕಳೆದ 2 ವರ್ಷಗಳಿಂದ ಕುಂದ್‍ಮೊಟ್ಟೆ ರೈಡ್, ರೀಪಬ್ಲಿಕ್ ರೈಡ್, ದಿ ಪೀಸ್‍ಫುಲ್ಲ್ ರೈಡ್ ಎಂಬ ಸಾಹಸಮಯ ಬೈಕ್ ರೈಡನ್ನು ಮಾಡಿದರು.
ಬೈಕ್ ಸಾಹಸಿಗರು ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ ಕೇರಳ, ಬೆಂಗಳೂರು, ಮೈಸೂರು ಹಾಗೂ ಕೊಡಗಿನ ನಾನಾ ಕಡೆಯಿಂದ ಒಟ್ಟು ಸೇರಿದ 23 ಬೈಕ್‍ರೈಡರ್ಸ್ ತಂಡ ಹುದಿಕೇರಿಯಿಂದ ಹೈಸೊಡ್ಲೂರು, ಕೂಟಿಯಾಲ ಪೊಳೆ ಮಾರ್ಗವಾಗಿ ತೆರಳಿ ಹಿಂದಿರುಗಿ ತಾಳಮಾನಿ, ಕಳ್ಳತೋಡ್, ಎತ್ತ್‍ಕಡ್‍ವಿನ ಮೂಲಕ ಹುದಿಕೇರಿಗೆ ತಲಪಿದರು.
ಈ ಹಿಂದೆ ಆಯೋಜಿಸಿದ ರೈಡ್‍ನಲ್ಲಿ ರಸ್ತೆ ಹಾಗೂ ಬೆಟ್ಟಗುಡ್ಡಗಳಿದ್ದು, ಈ ವರ್ಷದ ರೈಡ್‍ನಲ್ಲಿ ನಡೆಯಲು ಯೋಗ್ಯವಲ್ಲದ ರಸ್ತೆಗಳಲೆಲ್ಲ ಈ ರೈಡ್‍ನ್ನು ಅಯೋಸಿದ್ದು ಕಲ್ಲುಗುಂಡಿ, ಕುರುಚಲು ಕಾಡುಮೇಡು, ಬೆಟ್ಟವನೇರುವದು, ಮಳೆಯಿಂದ ತುಂಬಿದ ತೋಡುತೊರೆಯ ನಡುವೆ ಚಲದಿಂದ ಬೈಕ್ ಸಾಹಸವನ್ನು ಮಾಡಿದರು. ಕೆಲವೆಡೆ ಕೆಸರಿನ ನಡುವೆ ಹೂತುಕೊಂಡ ಬೈಕನ್ನು ಇತರೆ ರೈಡರ್‍ಗಳು ಎಳೆದರು. ಜಾರುಮಣ್ಣಿನ ನಡುವೆ ಬೆಟ್ಟಹತ್ತಲಾಗದೆ ಹರಸಾಹಸ ಪಡುವ ಬೈಕ್‍ಗಳನ್ನು ರೈಡರ್‍ಗಳೆಲ್ಲ ಸೇರಿ ಎಳೆದು ತಂದರು. ಕೊನೆಯ ಸುತ್ತಿನಲ್ಲಿ ಕಲ್ಲಿನಲ್ಲಿ ತೆರಳುವಾಗ ಬೆಂಗಳೂರಿನ ರೈಡರ್ ಓಡಿಸುತಿದ್ದ ಬೈಕ್‍ಪಂಚರ್ ಆಯಿತು. ಕೊನೆಗೆ 22 ರೈಡರ್‍ಗಳು ಸಾಹಸÀದೊಂದಿಗೆ ತಮ್ಮ ಗುರಿಯನ್ನು ತಲಪುವ ಮೂಲಕ ರೈಡ್‍ಗೆ ತೆರೆ ಎಳೆದರು.
- ಪುತ್ತರಿರ ಕರುಣ್ ಕಾಳಯ್ಯ