ಮಡಿಕೇರಿ, ಆ. 3: ಸಂಪಾಜೆ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ್ ಪಡ್ಪು 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ಸಂಪಾಜೆ ಗ್ರಾಮದ ಪ್ರಶಾಂತ್ ಕೆಮ್ಮಾರ, ಸುರೇಶ್ ನಾಯ್ಕ್, ಸುದರ್ಶನ ಕಟ್ಟೆಕೋಡಿ, ಹೊನ್ನಪ್ಪ ಪಡ್ಪು, ನಿರ್ಮಲ ಭರತ್, ಸೌಮ್ಯ ನವೀನ್, ಹರಿಣಾಕ್ಷಿ ರಂಗಪ್ಪ, ಚಂದ್ರಾವತಿ ಬಾಳಕಜೆ, ದಿವ್ಯ ಕುಕ್ಕೆಟ್ಟಿ, ಕುಸುಮಾವತಿ ಕುಕ್ಕೆಟ್ಟಿ, ರೇಖಾ ಶಶಿಧರ್, ಭಾರತಿ ಚರಣ್, ಪ್ರಮೀಳಾ ಗೋಪಾಲ, ಆಸ್ಮಾ, ಅಮಿತ ಹೊದ್ದೆಟ್ಟಿ, ಗುಲಾಬಿ ಬಂಡಡ್ಕ, ವಾಸುದೇವ ಅರೆಕಲ್ಲು ಆಯ್ಕೆಯಾದರು.

ಸಮಿತಿಯ ನಾಮ ನಿರ್ದೇಶಕರಾಗಿ ಚೇತನ್, ಶಿಕ್ಷಕರು ಮತ್ತು ಕುಮಾರ್ ಚೆದ್ಕಾರ್, ಅಧ್ಯಕ್ಷರು ಗ್ರಾಮ ಪಂಚಾಯಿತಿ ಸಂಪಾಜೆ ಹಾಗೂ ಗ್ರೀಷ್ಮ, ಶಾಲಾ ನಾಯಕಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಶಾಲಾ ಸಮಿತಿಯ ಪದನಿಮಿತ್ತ ಸದಸ್ಯರಾಗಿ ಸಾವಿತ್ರಿ, ಮುಖ್ಯ ಶಿಕ್ಷಕರು ಹಾಗೂ ಪ್ರಮೀಳಾ ಕುಕ್ಕೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಆಯ್ಕೆಗೊಂಡರು.