ಮಡಿಕೇರಿ, ಆ. 3: ಮಡಿಕೇರಿ ಗೂಡ್ಸ್ ಟೆಂಪೆÇೀ ಮಾಲೀಕರ ಹಾಗೂ ಚಾಲಕರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ಆರ್. ಮಣಿಕಂಠ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಬಾಲಭವನದಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಕಾನೂನು ಸಲಹೆಗಾರÀ ಪಿ. ಕೃಷ್ಣಮೂರ್ತಿ, ಕಾನೂನು ಚೌಕಟ್ಟಿನಡಿ ಕಾರ್ಯ ನಡೆಸುವಂತೆ ಸಲಹೆ ನೀಡಿದರು. ಗೌರವಾಧ್ಯಕ್ಷÀ ಕಿಶೋರ್ ಕುಮಾರ್ ಸಂಘಟನೆಯ ಬಲವರ್ಧನೆಯ ಕುರಿತು ಮಾತನಾಡಿದರು.
ಹಾಲಿ ಅಧ್ಯಕ್ಷ ಎಂ.ಆರ್. ಮಣಿಕಂಠ ನೇತೃತ್ವದ ತಂಡ ಮುಂದಿನ ಮಾರ್ಚ್ ತನಕ ಮುಂದುವರಿಯುವಂತೆ ನಿರ್ಧರಿಸಿದರು. ಸಂಘದ ಕಾರ್ಯದರ್ಶಿ ಬಿ.ಎಸ್. ಜಯ ವಾರ್ಷಿಕ ವರದಿ ಹಾಗೂ ಖಜಾಂಚಿ ಪ್ರಸಾದ್ ಲೆಕ್ಕಪತ್ರವನ್ನು ಮಂಡಿಸಿದರು. ನಿರ್ದೇಶಕ ಹರೀಶ್ ರೈ ಬೈಲಾವನ್ನು ಓದಿದರು, ಸಲಹೆಗಾರ ದಿವೇಶ್ ರೈ ವಂದಿಸಿದರು.