*ಗೋಣಿಕೊಪ್ಪಲು, ಆ. 3: ಬೆಂಗಳೂರಿನ ವಿಐಎಸ್ ನೆಟ್‍ವರ್ಕ್ ಸಂಸ್ಥೆ ವತಿಯಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ 120 ಬ್ಯಾಗ್, ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. ಬಾಳೆಲೆ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಸಮ್ಮುಖದಲ್ಲಿ ಸಂಸ್ಥೆಯ ಉಮಾಶಂಕರ್, ಎಲ್.ಎನ್. ರೆಡ್ಡಿ, ಪ್ರಜ್ವಲ್, ಕಿರಣ್ ಬ್ಯಾಗ್‍ಗಳನ್ನು ವಿತರಿಸಿದರು. ಕಾರ್ಮಾಡು, ದೇವನೂರು. ಬಾಳೆಲೆ, ತಟ್ಟೆಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೂ ಬ್ಯಾಗ್ ಹಾಗೂ ಲೇಖನಿ ಸಾಮಗ್ರಿಗಳನ್ನು ನೀಡಿದರು.

ತಾಲೂಕು ಪಂಚಾಯಿತಿ ಸದಸ್ಯ ಪ್ರಕಾಶ್, ವಿಜಯಲಕ್ಷ್ಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಪಿ.ಎ. ಪ್ರಭುಕುಮಾರ್, ಶಿಕ್ಷಕರುಗಳಾದ ಎಂ.ಪಿ. ರಾಘವೇಂದ್ರ, ಡಿ.ಎನ್. ಸುಬ್ಬಯ್ಯ, ಜಯಣ್ಣ, ತಿಮ್ಮರಾಜು ಹಾಜರಿದ್ದರು.