ನಾಪೆÇೀಕ್ಲು, ಆ. 3: ಕೂವಲೆ ಪುಟ್ಟ್, ಮದ್ದ್ ಪುಟ್ಟ್, ಬಾಳೆನುರ್‍ಕ್, ಬಡವಕಜ್ಜಾಯ, ಬೂಕ್‍ಕಜ್ಜಾಯ, ಕೇಂಬು ಕರಿ, ಕಾಡ್‍ಮಾಂಗೆ ಕರಿ, ಕುರುಕರಿ, ಬೈಂಬಳೆ ಕರಿ, ಕುಮ್ಮು ಕರಿ, ಒಣಕ್ ಯರ್ಚಿ ಕರಿ, ಕೊಯಿಲೆ ಮೀನ್ ಕರಿ, ನಾಡ್ ಕೋಳಿ ಕರಿ, ಕಕ್ಕಳೆ ಞಂಡ್ ಕರಿ, ಪಂದಿ ಕರಿ, ಚಕ್ಕೆಕುರು ಪಜ್ಜಿ, ಕೈಪುಳಿ ಪಜ್ಜಿ, ಇಂಜಿ ಪಜ್ಜಿ, ಕೆಂಜರಿ ಸುಳಿ, ಕೇಂಬು ಪಜ್ಜಿ, ಅಂಬಟೆ ಪಾರ, ಚೋರಂಗೆ ಪಾರ, ಕೈಪುಳಿ ಪಾರ, ಬಡಪುಳಿ ಪಾರ, ಮಾಂಗೆ ಪಾರ, ತಾತೆತೊಪ್ಪ್ ಬರತದ್, ತೆರ್ಮೆತೊಪ್ಪ್ ಬರತದ್, ಕಾಕೆತೊಪ್ಪ್ ಬರತದ್, ಮಳುತೊಪ್ಪ್ ಬರತದ್, ಕೀರೆತೊಪ್ಪ್ ಬರತದ್, ಕೊಡವ ತೀನಿರ ರಸ ಪ್ರಶ್ನೆ, ವಾಲಗತಾಟ್ ಕಾರ್ಯಕ್ರಮಗಳಿಗೆ ನಾಪೋಕ್ಲು ಕೊಡವ ಸಮಾಜ ಸಾಕ್ಷಿಯಾಯಿತು.ನಾಪೆÇೀಕ್ಲು ಕೊಡವ ಸಮಾಜ ಮತ್ತು ಸಮಾಜದ ಪೊಮ್ಮಕ್ಕಡ ಪರಿಷತ್ ಮತ್ತು ಸಂಯುಕ್ತಾಶ್ರಯದಲ್ಲಿ ನಾಪೆÇೀಕ್ಲು ಕೊಡವ
(ಮೊದಲ ಪುಟದಿಂದ) ಸಮಾಜದಲ್ಲಿ ನಡೆದ ಕಕ್ಕಡ 18 ತೀನಿ ನಮ್ಮೆ ಕಾರ್ಯಕ್ರಮವನ್ನು ನೆಲಜಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕಿ ಚೀಯಕಪೂವಂಡ ಪೂವಿ ಸೋಮಣ್ಣ ಉದ್ಘಾಟಿಸಿದರು.
ತಿಂಡಿ ತಿನಸುಗಳ ಪ್ರದರ್ಶನ ಸಭಾಂಗಣದ ಉದ್ಘಾಟನೆಯನ್ನು ನಾಪೆÇೀಕ್ಲು ಪೆÇಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡವರಿಗೆ ಕೈಲುಮೂರ್ತ, ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬಗಳು ಮುಖ್ಯವಾದವಗಳು ಇನ್ನಿತರ ಹಬ್ಬಗಳನ್ನು ತಮ್ಮ, ತಮ್ಮ ಮನೆಯಲ್ಲಿ ಆಚರಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಮತ್ತು ಕೊಡವ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಕಕ್ಕಡ 18 ನ್ನು ಸಾಮೂಹಿಕವಾಗಿ ಆಚರಿಸಲಾಗುತ್ತಿದೆ ಎಂದರು.
ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಕಕ್ಕಡ 18 ಮತ್ತು ಕಾವೇರಿ ಸಂಕ್ರಮಣ ಹಬ್ಬಗಳನ್ನು ನಿಗದಿತ ದಿನದಂದೆ ನಡೆಸಬೇಕು. ಸರಕಾರ ಬದಲಾವಣೆಯಾದ ಹಿನ್ನಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರದ್ದಾಗಿರುವ ಕಾರಣ ಅಕಾಡೆಮಿಯಿಂದ ಕಾರ್ಯಕ್ರಮ ನಡೆಸಬಾರದು ಎಂದು ರಿಜಾಸ್ಟ್ರಾರ್ ಪತ್ರಿಕೆಯಲ್ಲಿ ಹೇಳಿಕೆ ನೀಡಿರುವ ಬಗ್ಗೆ ಕಿಡಿ ಕಾರಿದ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವದು ಎಂದು ಹೇಳಿದರು.
ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ, ಕೊಡವರಿಗೆ ಮೀಸಲಾತಿ ನೀಡುವದರೊಂದಿಗೆ ಜನಾಂಗ, ಭಾಷೆ, ಸಂಸ್ಕøತಿ, ಪದ್ಧತಿ, ಪರಂಪರೆಗಳಿಗೆ ರಕ್ಷಣೆ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ವಹಿಸಿದ್ದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಕೋಡಿಮಣಿಯಂಡ ಉಮಾ ಬಿದ್ದಯ್ಯ, ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ ಇದ್ದರು.
ಕಲಿಯಂಡ ಬೀನಾ ಅಯ್ಯಣ್ಣ ಪ್ರಾರ್ಥನೆ, ಬಿದ್ದಂಡ ಉಷಾದೇವಮ್ಮ ಸ್ವಾಗತ, ಬಾಳೆಯಡ ದಿವ್ಯ ನಿರೂಪಿಸಿ, ಅಪ್ಪಾರಂಡ ನಂದಿನಿ ವಂದಿಸಿದರು.
ಸಿ.ಎನ್.ಸಿ. ಆಚರಣೆ
ಸಾಂಪ್ರದಾಯಿಕ ಸಿ.ಎನ್.ಸಿ.ಯು ವತಿಯಿಂದ 24ನೇ ವರ್ಷದ ಸಾರ್ವತ್ರಿಕ “ಕಕ್ಕಡ ಪದ್‍ನೆಟ್ಟ್” ನಮ್ಮೆಯನ್ನು ಇಂದು ಕ್ಯಾಪಿಟಲ್ ವಿಲೇಜಿನಲ್ಲಿ ಆಚರಿಸಲಾಯಿತು. ಕಕ್ಕಡ ನಮ್ಮೆಯನ್ನು ಕೃಷಿ ಚಟುವಟಿಕೆಯ ಪರಕಾಷ್ಟೆಯ ಸಂದರ್ಭ ಆಚರಿಸುತ್ತಾರೆ ಈ ಹಿನ್ನೆಲೆಯಲ್ಲಿ ಸಿ.ಎನ್.ಸಿ. ಸಂಘಟನೆ ಕ್ಯಾಪಿಟಲ್ ವಿಲೇಜ್ ಭತ್ತದ ಗದ್ದೆಯಲ್ಲಿ ನಾಟಿಯನ್ನು ನೆಡುವದರ ಮೂಲಕ ಉದ್ಘಾಟಿಸಿ; ನಂತರ ಮದ್ದ್ ಪುಟ್ಟ್ ಮತ್ತು ಮದ್ದ್ ಪಾಯಸ ಹಾಗೂ ಕೋಳಿಯ ಭಕ್ಷ್ಯವನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮವೂ ನಮ್ಮ ಹೋರಾಟಕ್ಕೆ ಸ್ಪೂರ್ತಿ ಮತ್ತು ಚೈತನ್ಯ ನೀಡಲಿದೆ ಎಂದು ಇದೇ ಸಂದರ್ಭ ಸಂಘಟನೆ ಮುಖ್ಯಸ್ಥ ಎನ್.ಯು. ನಾಚಪ್ಪ ನುಡಿದರು. ಭಾಗವಹಿಸಿದವರೆಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮವೂ ಸಹಜವಾಗಿ ನಿಸರ್ಗದ ಆಶೀರ್ವಾದ ದೊಂದಿಗೆ ಆಸ್ವಾಧಿಸುವ -ಸಂಭ್ರಮಿಸುವ ಅನನ್ಯ ಕಾರ್ಯಕ್ರಮವಾಗಿದೆ.
ಕೊಡವ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 342ನೇ ವಿಧಿ ಪ್ರಕಾರ ರಾಜ್ಯಾಂಗ ಖಾತರಿ ಮತ್ತು ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು ಮತ್ತು ಮೈಕ್ರೋ ಮೈನಾರಿಟಿ ಕೊಡವ ಬುಡಕಟ್ಟು ಕುಲ ಮತ್ತವರ ಪರಂಪರೆಯನ್ನು ವಿಶ್ವ ಸಂಸ್ಥೆಯ ಪಟ್ಟಿಗೆ ಸೇರಿಸಬೇಕೆಂಬ ನಿರ್ಣಯ ವನ್ನು ಅಂಗೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಅಪ್ಪಾರಂಡ ಪ್ರಕಾಶ್, ಪೊರಿಮಂಡ ದಿನಮಣಿ, ಪುಳ್ಳಂಗಡ ನಟೇಶ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಪುಲ್ಲೇರ ಕಾಳಪ್ಪ, ಚೆಂಬಂಡ ಜನತ್, ಮಂದಪಂಡ ಮನೋಜ್, ಚಂಡೀರ ರಾಜ, ಮೈಸೂರು ಟ್ರೈಬಲ್ ರಿಸರ್ಚ್ ಇನ್ಸ್‍ಟಿಟ್ಯೂಟ್‍ನ ಡಾ. ಮಧುಸೂದನ್ ಮತ್ತು ಕೊಡವ ಜನಪದ ಸಂಶೋಧಕಿ ಭಾಗ್ಯ ಮುಂತಾದವರು ಭಾಗವಹಿಸಿದ್ದರು.