ಸಿದ್ದಾಪುರ, ಆ. 1: ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಆಶ್ರಯದಲ್ಲಿ 2 ದಿನಗಳ ವಿಶೇಷ ಶಿಬಿರ ಹಾಗೂ ವಿಚಾರ ಸಂಕಿರಣ ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣ ನಡೆಯಿತು.
ಸಾಮಾಜಿಕ ಜಾಲತಾಣ ಹಾಗೂ ಮಾದಕ ವ್ಯಸನಿಗಳಿಗೆ ಬಲಿಯಾಗುತ್ತಿರುವ ಯುವ ಸಮೂಹ. ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕೇರಳ ವಕ್ಫ್ ಬೋರ್ಡ್ ಶಿಬಿರ ತರಬೇತಿದಾರ ಶಾನವಾಜ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನಗಳೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಸಾಧಿಸುವ ಛಲದೊಂದಿಗೆ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಗುರಿ ಮುಟ್ಟಬೇಕೆಂದರು.
ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಪ್ರಮುಖ ಕರೀಂ ಮಾತನಾಡಿ ಇಂದಿನ ಯುವಸಮೂಹ ಸಾಮಾಜಿಕ ಜಾಲತಾಣ ಹಾಗೂ ಮಾದಕ ವ್ಯಸನಿಗಳಿಗೆ ಹೆಚ್ಚು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಯುವ ಸಮೂಹವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದ್ದು, ಸಿದ್ದಾಪುರ ಸುತ್ತಮುತ್ತಲಿನ ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. 14 ವರ್ಷ ಮೇಲ್ಪಟ್ಟ ಅವಿವಾಹಿತ ಯುವಕ ಯುವತಿಯರಿಗಾಗಿ ವಿವಾಹಪೂರ್ವ ತರಗತಿ ಮತ್ತು ನಿರ್ವಹಣಾ ಕಾರ್ಯಾಗಾರದಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಗಳು ಭಾಗವಹಿಸಿದ್ದರು
ವಿಶೇಷ ಶಿಬಿರದಲ್ಲಿ ವಿವಾಹಪೂರ್ವ ಸಿದ್ಧತೆ, ವೈವಾಹಿಕ ಜೀವನ, ನಿರ್ವಹಣಾ ಕಾರ್ಯಾಗಾರ, ಯುವಕರಿಗೆ ಮಾರ್ಗದರ್ಶನ, ಸಂತೋಷ ಮತ್ತು ಆರೋಗ್ಯಕರ ಬೆಳವಣಿಗೆ ,ಮಾನವ ಜೀವ ಶಾಸ್ತ್ರ ಹಾಗೂ ಲೈಂಗಿಕ ಶಿಕ್ಷಣದ ಬಗ್ಗೆ ಯುವಕ ಯುವತಿಯರಿಗೆ ವಿಶೇಷ ಶಿಬಿರದಲ್ಲಿ ಶಿಕ್ಷಕರಾದ ಇಸ್ಮಾಯಿಲ್ ಹುದವಿ, ಶಬ್ನಮ್ ಮಾರ್ಗದರ್ಶನ ನೀಡಿದರು.
ವಿಚಾರ ಸಂಕಿರಣದಲ್ಲಿ ಸಿದ್ದಾಪುರ ಮುಸ್ಲಿಂ ಅಸೋಶಿಯೇಶನ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಮಸೀದಿಯ ಖತೀಬ್ ನೌಫಾಲ್ ಹುದವಿ, ಮುನವ್ವಿರುಲ್ ಇಸ್ಲಾಂ ಮದ್ರಸ ಅಧ್ಯಾಪಕ ಆರಿಫ್ ಫೈಝಿ,ಸಮಿತಿಯ ಕಾರ್ಯದರ್ಶಿ ಮುಸ್ತಫಾ ಹಾಜಿ, ಪ್ರಮುಖರಾದ ತಮ್ಲಿಕ್ ದಾರಿಮಿ, ಇಸ್ಮಾಯಿಲ್ ಹುದವಿ, ರಹೂಫ್ ಹಾಜಿ, ಸೌಕತ್ ಹಾಜಿ, ಆಸ್ಕರ್, ಸಮೀರ್, ಕರೀಂ, ವೈ.ಎಂ.ಎ. ಅಧ್ಯಕ್ಷ ಕಲೀಲ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.