ಮಡಿಕೇರಿ, ಆ. 1: ನಗರದ ಗಣಪತಿ ಬೀದಿಯಲ್ಲಿ ಮಾಜೀ ಸಚಿವ, ಉದ್ಯಮಿ ಟಿ. ಜಾನ್ ಅವರ ಬಂಗಲೆಗೆ ನುಗ್ಗಿ ಕಳ್ಳತನ ಎಸಗಿರುವ ಮೂವರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹದೇವಪೇಟೆಯ ಸುಮಂತ್, ಅನ್ವರ್ ಹಾಗೂ ಜೂಪಿಕರ್ ಈ ಕೃತ್ಯವೆಸಗಿದ್ದು, ಯಾರೂ ವಾಸವಿಲ್ಲದ ಮನೆಗೆ ಕನ್ನ ಹಾಕಿ, ಗೋಡೆ ಗಡಿಯಾರ, ಬೆಡ್‍ಸೀಟ್ ಇತ್ಯಾದಿ ಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದೊಯ್ದಿದ್ದರು. ಆರೋಪಿಗಳಿಂದ ಎಲ್ಲವನ್ನು ವಶಕ್ಕೆ ಪಡೆದಿರುವ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
ಈ ಮೂವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸುವದರೊಂದಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
-ಟಿ.ಜಿ. ಸತೀಶ್