ಸುಂಟಿಕೊಪ್ಪ, ಆ.1: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಪ್ರಕರಣ ಪತ್ತೆ ಯಾಗಿರುವ ವರದಿಗೆ ಸ್ಪಂದಿಸಿದ ಗ್ರಾ.ಪಂ.ಯ ಸಿಬ್ಬಂದಿ ಗಳು ಉಲುಗುಲಿ 1ನೇ, 2ನೇ ವಾರ್ಡ್ ಹಾಗೂ ಮಧುರಮ್ಮ ಬಡಾವಣೆಗಳಲ್ಲಿ ಪೌರ ಕಾರ್ಮಿಕರನ್ನು ಬಿಟ್ಟು ಸೊಳ್ಳೆಗಳ ನಾಶಕ್ಕೆ ಸೋಡಿಯಂ ಹೈಪೋ ಕ್ಲೋರಾಯಿಡ್ ಸಿಂಪಡಿಸಿ ಹಾಗೂ ಬ್ಲಿಚಿಂಗ್‍ಪೌಂಡರ್ ಅನ್ನು ಹಾಕುವ ಕಾರ್ಯವನ್ನು ಕೈಗೊಂಡರು. ಸುಂಟಿಕೊಪ್ಪದಲ್ಲಿ 1 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಇದರಿಂದ ಮತ್ತಷ್ಟು ಮಂದಿಗೆ ಡೆಂಗ್ಯೂ ಜ್ವರ ತಗಲುವ ಸಾಧ್ಯತೆಯಿರುವ ಬಗ್ಗೆ ಪತ್ರಿಕೆ ಬೆಳಕು ಚೆಲಿತ್ತು. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಅವರು ಮನುಷ್ಯನ ಶರೀರದಲ್ಲಿರುವ ರಕ್ತಕಣದ ಸಂಚಲನ ಒಂದೂವರೆ ಲಕ್ಷದಿಂದ 4 ಲಕ್ಷದವರೆಗೆ ಹಂತ ಹಂತವಾಗಿ ಸಂಚರಿಸುತ್ತದೆ. ಸೊಳ್ಳೆ ಕಚ್ಚಿ ರಕ್ತ ಹೀರುವದರಿಂದ ಕೆಲವರ ಶರೀರದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಆಗ ಶರೀರದ ರಕ್ತ ಸಂವಹನಾ ಕ್ರಿಯೆಯಲ್ಲಿ ಕುಂಠಿತಗೊಳ್ಳುವದಲ್ಲದೆ ರಕ್ತ ಸಂಚಲನದಲ್ಲಿ ಹಿನ್ನಡೆಯಾಗಿ 10,000ದವರೆಗೆ ರಕ್ತ ಶರೀರದಲ್ಲಿ ಸಂಚಲನಾ ಕ್ರಿಯೆಯಾಗುವಾಗ ಡೆಂಗ್ಯೂ ಜ್ವರ ಆಗಿದೆ ಎಂದು ಪತ್ತೆ ಮಾಡಲಾಗುವದು ಇದರಲ್ಲಿ ಕೆಲವರಿಗೆ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದರೂ ಅದನ್ನು ಪರಿವೀಕ್ಷಣೆಗೆ ಒಳಪಡಿಸಲಾಗುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಸ್ವಚ್ಛತೆ ಸೊಳ್ಳೆಕಾಟ ನಿಯಂತ್ರಿಸಲು ಜನ ಸಾಮಾನ್ಯರು ಎಚ್ಚರ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರಿಕೆಯಲ್ಲೂ ಪತ್ತೆ
ಕಳೆದ ಕೆಲ ವರ್ಷಗಳಿಂದ ಗಡಿ ಗ್ರಾಮ ಕರಿಕೆಯಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾದ ಮಾರಕ ಡೆಂಗ್ಯೂ ಈ ಬಾರಿ ಮತ್ತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಶುರುವಾಗಿದೆ. ಕರಿಕೆ ತೋಟಂ ನಿವಾಸಿ ಲತೀಪ್ ಎಂಬವರಿಗೆ ಈ ಜ್ವರ ಕಾಣಿಸಿಕೊಂಡಿದ್ದು, ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದ್ದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕಾಗಿದೆ.