ಮಡಿಕೇರಿ, ಆ. 1: ಸರಕಾರದ ಆದೇಶದಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ನಾಮನಿರ್ದೇಶ ನವನ್ನು ರದ್ದುಪಡಿಸಿರುವದರಿಂದ ತಾ. 3 ರಂದು ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕಕ್ಕಡ 18-ತೀನಿ ನಮ್ಮೆ’ ಸಮಾರಂಭವನ್ನು ಹಾಗೂ ತಾ. 7 ರಂದು ಅರಮೇರಿ ಕೋಟೇರ ಎಂ. ಮನು ಮತ್ತು ಕೋಟೇರ ಯು. ನವೀನ್ ಇವರ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಲ್‍ನಮ್ಮೆ 2019 ಸಮಾರಂಭವನ್ನು ರದ್ದುಪಡಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.