ಮಡಿಕೇರಿ: ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಕಾರ್ಗಿಲ್ ವಿಜಯಕ್ಕೆ ಕಾರಣರಾದ ಹುತಾತ್ಮ ಯೋಧರನ್ನು ಸ್ಮರಿಸಿದರು. ದಿನದ ಮಹತ್ವವನ್ನು ಉಪನ್ಯಾಸಕ ಲೆ. ಪಿ.ಎಂ. ಕಾವೇರಪ್ಪ ವಿವರಿಸಿದರು.
ವೀರ ಯೋಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೇಣು ಅಪ್ಪಣ್ಣ, ಹಿರಿಯ ಉಪನ್ಯಾಸಕಿ ಬಿ.ಎನ್. ಮಮತ ಉಪಸ್ಥಿತರಿದ್ದರು.ಸಿದ್ದಾಪುರ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಸಿದ್ದಾಪುರದ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಬಸ್ ನಿಲ್ದಾಣದಲ್ಲಿ ಜಯಘೋಷ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದÀರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಜ್ಯದಲ್ಲಿ ಅಪವಿತ್ರ ಮೈತ್ರಿಯನ್ನು ದ್ವೇಷಿಸುತ್ತಿದ್ದ ರಾಜ್ಯದ ಜನತೆ ಬಿಜೆಪಿ ನೇತೃತ್ವದ ಸರಕಾರವನ್ನು ಸ್ವೀಕರಿಸಿರುವದು ಜನರ ಸಂಭ್ರಮಾಚರಣೆಯಿಂದ ತಿಳಿಯಬಹುದು. ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ರಾಜ್ಯದ ಸರ್ವರ ಅಭಿವೃದ್ಧಿಯನ್ನು ಮನದಲ್ಲಿಟ್ಟು ಆಡಳಿತ ನಡೆಸುತ್ತದೆ ಎಂದರು.ಅಲ್ಲದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ನಿಷೇಧಿಸುವದಾಗಿ ಭರವಸೆ ನೀಡಿತ್ತು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಧಿಕಾರ ವಹಿಸಿದ ಎರಡು ದಿನಗಳಲ್ಲೇ ಟಿಪ್ಪು ಜಯಂತಿ ಆಚರಣೆಯನ್ನು ನಿಷೇಧ ಮಾಡುವ ಕುರಿತು ನಿರ್ಧಾರವನ್ನು ಕೈಗೊಂಡಿರುವದು ಸಂತಸ ತಂದಿದೆ ಎಂದರು.
ವಿಜಯೋತ್ಸವ ಕಾರ್ಯಕ್ರಮದಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕುನೂರು ನಾಣಯ್ಯ, ಕಾರ್ಯದರ್ಶಿ ಅಶೋಕ, ಮುಖಂಡರುಗಳಾದ ಅನಿಲ್ ಶೆಟ್ಟಿ, ಆನಂದ, ಪ್ರಜೀತ್, ಹರಿದಾಸ್, ಪ್ರಚೀಣ್, ಕಿಶೋರ್, ಗಿರೀಶ್, ಜಯರಾಮ್, ರಾಜೀವ್ ಇನ್ನಿತರರು ಹಾಜರಿದ್ದರು.