ಬೆಂಗಳೂರು, ಆ. 2: ಇತ್ತೀಚೆಗಷ್ಟೇ ಬೆಂಗಳೂರು ನಗರ ಪೆÇಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ನೂತನ ಬಿಜೆಪಿ ಸರ್ಕಾರ ಏಕಾಏಕೀ ವರ್ಗಾವಣೆ ಮಾಡಿದ್ದು, ಎಡಿಜಿಪಿ ಭಾಸ್ಕರ್ ಅವರನ್ನು ನೂತನ ಆಯುಕ್ತರಾಗಿ ನೇಮಿಸಲಾಗಿದೆ. ಅಲೋಕ್‍ಕುಮಾರ್ ಅವರನ್ನು ಕರ್ನಾಟಕ ಮೀಸಲು ಪೆÇಲೀಸ್ ಪಡೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಮೀಸಲು ಪೆÇಲೀಸ್ ಪಡೆಯ ಎಡಿಜಿಪಿ ಆಗಿದ್ದ ಭಾಸ್ಕರ್ ರಾವ್ ಅವರನ್ನು ಕಮಿಷನರ್ ಹುದ್ದೆಗೆ ನೇಮಿಸಿದೆ.