ಮಡಿಕೇರಿ, ಜು. 31: ಜನಪರ ಸಂಘಟನೆ ಮಾಲ್ದಾರೆ ಹಾಗೂ ನೆಹರು ಯುವ ಕೇಂದ್ರ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಲ್ದಾರೆ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಾಲೆಯ ಸುತ್ತಲೂ ಮತ್ತು ಕುಡಿಯುವ ನೀರಿನ ಟ್ಯಾಂಕ್ ಶಾಲಾ ಆಟದ ಮೈದಾನಗಳಲ್ಲಿ ಬೆಳೆದುನಿಂತ ಕಾಡನ್ನು ಕಡಿದು ಸಂಘದ ವತಿಯಿಂದ ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜನಪರ ಸಂಘಟನೆಯ ಅಧ್ಯಕ್ಷರು ಆಂಟೋನಿ, ಕಾರ್ಯದರ್ಶಿ ಅಸೀಸ್, ಖಜಾಂಚಿ ಹರಿಪ್ರಸಾದ್, ವಿನಿಲ್, ಸತೀಶ್, ಪುನೀತ್, ಪ್ರವೀಣ್, ಶೌಕತ್ ಆಲಿ, ಅನಿಲ್, ಶಿವಕುಮಾರ್, ಸಲೀಂ, ರಸನ್, ಶಫೀಕ್, ಅಭಿ, ಅಪ್ಪು, ಸಾರ್ವಜನಿಕರಾದ ರಾಮಕೃಷ್ಣ, ಗಣೇಶ ಇನ್ನಿತರರು ಕೈಜೋಡಿಸಿದರು.