ವೀರಾಜಪೇಟೆ, ಜು. 31: ಇಲ್ಲಿನ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಯಿತು.. ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ ಈ ವಿಷಯದಲ್ಲಿ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕರಾದ ಅರ್ಜುನ್ ಟಿ.ಎನ್, ಹಾಗೂ ಜನಪದ ಸಾಹಿತ್ಯದಲ್ಲಿ ಸ್ತ್ರೀಶಕ್ತಿ ವಿಷಯದಲ್ಲಿ ಕಾವೇರಿ ಕಾಲೇಜು ಉಪನ್ಯಾಸಕರಾದ ಕಾಳೇಂಗಡ ದಮಯಂತಿ ವಿಚಾರ ಮಂಡಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಎಸ್ ಎಂ ಎಸ್ ವಿದ್ಯಾಪೀಠದ ಪ್ರಾಂಶುಪಾಲೆ ಬಲ್ಲಚಂಡ ಕುಸುಮ್ ಟಿಟೋ ಉಪಸ್ಥಿತರಿದ್ದರು.

ಕವಿಗೋಷ್ಠಿ: ಸಾಹಿತಿ ಪ್ರೊ ದಂಬೆಕೋಡಿ ಸುಶೀಲ ಅಧ್ಯಕ್ಷತೆಯಲ್ಲಿ ನಡೆಯಿತು. ಕನ್ನಡ ಜಾಗೃತಿ ಸಮಿತಿ ಕರ್ನಾಟಕ ಸರಕಾರದ ನಿರ್ದೇಶಕಿ ಮುಲ್ಲೇಂಗಡ ರೇವತಿ ಪೂವಯ್ಯ ಮುಖ್ಯ ಅತಿಥಿಗಳಾಗಿದ್ದರು

ಬಡಕಡ ರಜಿತ ಕಾರ್ಯಪ್ಪ ಅಮ್ಮ ಎಂದರೆ ಮಮತೆಯ ಮಡಿಲು ಪ್ರೀತಿಯ ಕಡಲು. ತಾತಂಡ ರಾಣಿ ನಂಜಪ್ಪ, ನಿಶಕ್ತಿ, ನಳಿನಿ ಬಿಂದು ಕವಿಯ ಲೀಲೆ, ಚೆಂಬಾಂಡ ಶಿವಿ ಭೀಮಯ್ಯ ನಮ್ಮೆಯ ಸ್ಥಿತಿಗತಿ, ವಿಮಲ ದಶರಥ ಅವರ ಬದುಕು, ವೈಲೇಶ್ ಪಿ.ಎಸ್ ಈ ಬದುಕು ಎಂದೇಂದು ಹೀಗೆ, ಪುಷ್ಪಲತ ಶಿವಪ್ಪ, ಕು.ಹೇಮಾವತಿ ಜನುಮದಿನ ಬಗ್ಗೆ ವಾಚನ ವಾಚಿಸಿದರು.

ಸಮಾರೋಪ: ಕನ್ನಡ ಸಾಹಿತ್ಯ ಪರಿಷತ್ತಿನ 8ನೇ ಸಾಹಿತ್ಯ ಸಮ್ಮಳನದ ಸಮಾರೋಪ ಸಮಾರಂಭ ವೀರಾಜಪೇಟೆ ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರ ಅದ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಅರಮೇರಿ ಮಠಾಧೀಶ ಶಾಂತಮಲ್ಲಿಕಾರ್ಜುನಾ ಸ್ವಾಮೀಜಿ, ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಸಮ್ಮೇಳನ ಅಧ್ಯಕ್ಷೆ ನಾಯಕಂಡ ಬೇಬಿ ಚಿಣ್ಣಪ್ಪ, ತಾಲೂಕು ತಹಶೀಲ್ದಾರ್ ಕೆ.ಪುರಂದರ್, ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಬಿಇಒ ಶ್ರೀಶೈಲ ಬೀಳಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಎಸ್ ಪೂವಯ್ಯ ವೇದಿಕೆಯಲ್ಲಿದ್ದರು.