ಮಡಿಕೇರಿ, ಜು. 31: ರಾಜ್ಯ ಸರ್ಕಾರದಿಂದ ಕೊಡಗಿಗೆ ಸುಮಾರು 500 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಸಂಬಂಧ ಸರ್ಕಾರಕ್ಕೆ ಸಲ್ಲಿಸಬೇಕಿರುವ ಪ್ರಸ್ತಾವನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಗ್ರಾಮೀಣ ರಸ್ತೆ ದುರಸ್ತಿ ತಡೆಗೋಡೆ, ಚರಂಡಿ ನಿರ್ಮಾಣಕ್ಕಾಗಿ 324 ಕೋಟಿ, ಸಣ್ಣ ನೀರಾವರಿ ಯೋಜನೆಗೆ 10 ಕೋಟಿ, ನೀರಾವರಿ ಯೋಜನೆಗೆ 1 ಕೋಟಿ, ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣ ತಡೆಗೋಡೆ ನಿರ್ಮಾಣಕ್ಕೆ 2.96 ಕೋಟಿ, ಜಿಲ್ಲೆಯ ಮೂರು ತಾಲೂಕಿನ ಪ್ರಮುಖ ನಗರಗಳ ರಾಷ್ಟ್ರೀಯ ಹೆದ್ದಾರಿಗಳಿಗೆ ಶಾಶ್ವತ ಕಾಯಕಲ್ಪಕ್ಕೆ 83 ಕೋಟಿ ರೂ.ಗಳ ಬೇಡಿಕೆ ಮುಂದಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.