ಮಡಿಕೇರಿ, ಜು. 31: ಬೆಂಗಳೂರಿನ ಗುಪ್ತದಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಡುವಂಡ ಕಾಮಯ್ಯ ಗಣೇಶ್ ಅವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ. ಅತೀ ಗಣ್ಯ ವ್ಯಕ್ತಿಗಳ ರಕ್ಷಣಾ ವಿಭಾಗ, ಬಾಂಬ್ ನಿಷ್ಕ್ರಿಯ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಶ್ರೀಯುತರನ್ನು ಸಿಬಿಐಗೆ ನಿಯುಕ್ತಿಗೊಳಿಸಲಾಗಿತ್ತು. ನಂತರ ನಕ್ಸಲ್ ನಿಗ್ರಹ ದಳದಲ್ಲೂ ಉಡುಪಿ ಕಾರ್ಕಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದು, ಈಗ ಗುಪ್ತದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.