ವೀರಾಜಪೇಟೆ, ಜು. 31: ಇಲ್ಲಿಗೆ ಸಮೀಪದ ಕಾವೇರಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ವೀರಾಜಪೇಟೆ ವಿವೇಕ ಬಳಗ ಇವರ ಆತಿಥ್ಯದಲ್ಲಿ ಬಳಗ ಸ್ಫುರಣ ಕಾರ್ಯಕ್ರಮ ಶ್ರೀ ಗುರೂಜಿ ಸ್ವಾಮಿ ವಿವೇಕಾನಂದರ ಆಧ್ಯಾತ್ಮಕ ಪ್ರಯೋಗ ಶಾಲೆಯಾದ ಡಿವೈನ್ ಪಾರ್ಕ್, ಸಾಲಿಗ್ರಾಮ ಇದರ ನಿರ್ದೇಶನದಲ್ಲಿ ಸಂಸ್ಥೆಯ ಡಿ.ಎಲ್.ಓಗಳಾದ ಸುದೇಶ್ ರಾವ್ ಮತ್ತು ಜಗದೀಶ್ ಕುಂದರ್ ಇವರ ಮಾರ್ಗದರ್ಶನದಲ್ಲಿ ಶ್ರದ್ಧಾಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ರಾಮರಕ್ಷಸ್ತೋತ್ರ ಹಾಗೂ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಅತಿಥಿಗಳು ಮತ್ತು ವಿವೇಕ ಬಳಗದ ಎಲ್ಲಾ ಅಧ್ಯಕ್ಷರು ಸವಾಮಿ ವಿವೇಕಾನಂದರ ಆಶಯದಂತೆ ಈ ಭೂಲೋಕವನ್ನು ದೈವಲೋಕವನ್ನಾಗಿ ಮಾಡಬೇಕೆಂಬ ಅಚಲ ನಿರ್ಧಾರಕ್ಕೆ ಪೋಷಕಾಂಶಗಳಾದ ಸ್ನೇಹ, ಪ್ರೀತಿ, ತ್ಯಾಗ, ಸೇವೆ, ಕರ್ತವ್ಯ, ಕ್ಷಮೆ ಇವುಗಳನ್ನು ಸಮಾಜದಲ್ಲಿ ಬೆಳಗಿಸಬೇಕು ಎಂದು ಕರೆ ನೀಡಿದರು.

ಆತಿಥ್ಯ ಬಳಗದ ಉಸ್ತುವಾರಿಯನ್ನು ಶಶಿಕಲಾ ಹಾಗೂ ಹವ್ಯಾಸ್ ಮತ್ತು ಒಳಗದ ಅಧ್ಯಕ್ಷ ರವಿ ಮಾಚಯ್ಯ ವಹಿಸಿದ್ದರು. ಭಾಗವಹಿಸಿದ 5 ಬಳಗಗಳಾದ ವೀರಾಜಪೇಟೆ, ಮೂರ್ನಾಡು, ಕುಶಾಲನಗರ, ಹುಣಸೂರು ಮತ್ತು ಮಡಿಕೇರಿ ಇವರ ನಡುವೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ವೀರಾಜಪೇಟೆ ವಿವೇಕ ಬಳಗದವರು ಚಾಂಪಿಯನ್ ಆಫ್ ದ ವಿವೇಕ ಬಳಗ ಸ್ಫುರಣ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಆರ್. ಸೋಮಶೇಖರ್ ಸ್ವಾಗತಿಸಿ, ಶಶಿಕಲಾ ವಂದಿಸಿದರು. ಆಗಮಿಸಿದ ಭಕ್ತದಿಗಳಿಗೆ ಅನ್ನದಾದ ಏರ್ಪಡಿಸಲಾಗಿತ್ತು.