ಸೋಮವಾರಪೇಟೆ, ಜು. 31: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ. 1 ರಂದು (ಇಂದು) ಶತ್ರು ಸಂಹಾರ ಪೂಜೆ ಹಾಗೂ ತಾ. 5 ರಂದು ನಾಗರಪಂಚಮಿ ಪೂಜೆಗಳು ವಿಶೇಷವಾಗಿ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ತಿಳಿಸಿದ್ದಾರೆ.

ಈಗಾಗಲೇ ದೇವಾಲಯದಲ್ಲಿ ಕಳೆದ ಎರಡು ವಾರಗಳಿಂದ ಆಷಾಡ ಮಾಸಾಚರಣೆ ಅಂಗವಾಗಿ ದುರ್ಗಾ ದೀಪ ನಮಸ್ಕಾರ ಪೂಜೆಗಳು ನಡೆಯುತ್ತಿವೆ. ಗುರುವಾರ ನಡೆಯಲಿರುವ ಶತ್ರು ಸಂಹಾರ ಪೂಜೆ ಹಾಗೂ ಸೋಮವಾರ ನಡೆಯಲಿರುವ ನಾಗರಪಂಚಮಿ ಪ್ರಯುಕ್ತ ಬೆಳಗ್ಗೆ ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.