ಸಿದ್ದಾಪುರ, ಜು. 31: ತಮಿಳುನಾಡಿನಲ್ಲಿ ಉಂಟಾದ ಅಪಘಾತದಲ್ಲಿ ಜಿಲ್ಲೆಯ ಯುವಕ ಸಾವನ್ನಪ್ಪಿದ್ದಾನೆ. ಸಿದ್ದಾಪುರ ಪಾಲಿಬೆಟ್ಟ ರಸ್ತೆಯ ನಿವಾಸಿ ಮುಹಮ್ಮದ್ ಎಂಬವರ ಮಗ ನಿಸಾರ್ (27) ಸಾವನ್ನಪ್ಪಿದ ಯುವಕ.
ಕೇರಳದ ಎರ್ನಾಕುಲಂ ಎಂಬಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಸಾರ್ ಕೆಲಸದ ನಿಮಿತ್ತ ಎರ್ನಾಕುಲಂನಿಂದ ಬೆಂಗಳೂರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ತಮಿಳುನಾಡಿನ ಸೇಲಂ ಎಂಬಲ್ಲಿ ಬಸ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿ ಪತ್ನಿ ಹಾಗೂ ಒಂದೂವರೆ ವರ್ಷ ಪ್ರಾಯದ ಮಗಳನ್ನು ಅಗಲಿದ್ದಾನೆ.