ಮಡಿಕೇರಿ, ಜು. 31: ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಮಹಾಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.

ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ. ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಇದೀಗ ಪೂರ್ಣಗೊಳ್ಳುತ್ತಿದ್ದು ನೂತನ ಆಡಳಿತ ಮಂಡಳಿ ರಚನೆಗೆ ಆ. 25 ರಂದು ಚುನಾವಣೆ ನಿಗದಿಯಾಗಿದೆ.