ಮಡಿಕೇರಿ, ಜು. 30: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯಿಂದ ಬೊಯಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯೇತರ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಪುಸ್ತಕ, ಪೆನ್ಸಿಲ್, ಚಿತ್ರಕಲಾ ಪೆಟ್ಟಿಗೆ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್, ಕಾರ್ಯದರ್ಶಿ ಶಫಾಲಿ ರೈ, ಖಜಾಂಚಿ ನಮಿತಾ ರೈ, ಸದಸ್ಯೆಯರಾದ ಲಲಿತಾ ರಾಘವನ್, ವಿಜಯಲಕ್ಷ್ಮಿ ಚೇತನ್, ಶಮ್ಮಿ ಪ್ರಭು, ಬೊಳ್ಳುಮೇದಪ್ಪ, ಆಗ್ನೇಸ್ ಮುತ್ತಣ್ಣ, ಲತಾ ಚಂಗಪ್ಪ, ಲತಾ ಸುಬ್ಬಯ್ಯ ಪಾಲ್ಗೊಂಡಿದ್ದರು.