ಮಡಿಕೇರಿ, ಜು. 30: ಸ್ವಾಮಿ ವಿವೇಕಾನಂದ ಅವರು ಚಿಕಾಗೋದಲ್ಲಿ ಜರುಗಿದ ವಿಶ್ವ ಧರ್ಮ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ 125ನೇ ವರ್ಷಾಚರಣೆ ಪ್ರಯುಕ್ತ ಆಗಸ್ಟ್ 1 ಹಾಗೂ 2 ರಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಆಧ್ಯಾತ್ಮಿಕ ಶಿಬಿರ ಏರ್ಪಡಿಸಲಾಗಿದೆ. ಆ. 1 ರಂದು ಬೆಳಿಗ್ಗೆ 9.30ಕ್ಕೆ ಆಶ್ರಮದ ಸ್ವಾಮೀಜಿಗಳಾದ ಶ್ರೀ ಮುಕ್ತಿದಾನಂದ ಮಹಾರಾಜ್, ಶ್ರೀ ತತ್ವ ಬೋಧಾನಂದ ಮಹಾರಾಜ್, ಶ್ರೀ ಬೋಧಸ್ವರೂಪಾನಂದ ಮಹಾರಾಜ್, ಶ್ರೀ ಪರಹಿತನಂದಾ ಮಹಾರಾಜ್ ಮೊದಲಾದವರು ಉಪನ್ಯಾಸ ನೀಡಲಿದ್ದಾರೆ.

ಆ. 2 ರಂದು ಯುವ ಸಮ್ಮೇಳನ ನಡೆಯಲಿದ್ದು, ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಸಂತರು ಬೋಧಿಸಲಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಉಪನ್ಯಾಸ ನೀಡಲಿದ್ದಾರೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.